Home ಟಾಪ್ ಸುದ್ದಿಗಳು ಕಾಶ್ಮೀರಿ ಪಂಡಿತರು ತಮ್ಮ ಹಕ್ಕು ಕೇಳುತ್ತಿದ್ದಾರೆ, ಭಿಕ್ಷೆ ಬೇಡುತ್ತಿಲ್ಲ: ರಾಹುಲ್ ಗಾಂಧಿ

ಕಾಶ್ಮೀರಿ ಪಂಡಿತರು ತಮ್ಮ ಹಕ್ಕು ಕೇಳುತ್ತಿದ್ದಾರೆ, ಭಿಕ್ಷೆ ಬೇಡುತ್ತಿಲ್ಲ: ರಾಹುಲ್ ಗಾಂಧಿ

ನವದೆಹಲಿ: ಕಾಶ್ಮೀರಿ ಪಂಡಿತರ ನಿಯೋಗ ಇಂದು ನನ್ನನ್ನು ಭೇಟಿ ಮಾಡಿದೆ. ಅವರು ನನಗೆ ಹೇಳಿದ ಮಾತುಗಳಿಂದ ನನಗೆ ಆಘಾತವಾಯಿತು. ಕಾಶ್ಮೀರಿ ಪಂಡಿತರು ತಮ್ಮ ಹಕ್ಕು ಕೇಳುತ್ತಿದ್ದಾರೆ, ಭಿಕ್ಷೆ ಬೇಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ‌ ಹೇಳಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೊಡಿಸಲು ಕಾಂಗ್ರೆಸ್ ಶ್ರಮಿಸುತ್ತದೆ ಎಂದರು.‌

ಕಾಶ್ಮೀರಿ ಪಂಡಿತರ ನಿಯೋಗ ಇಂದು ನನ್ನನ್ನು ಭೇಟಿ ಮಾಡಿದೆ. ಅವರು ನನಗೆ ಹೇಳಿದ ಮಾತುಗಳಿಂದ ನನಗೆ ಆಘಾತವಾಯಿತು. ನೀವು ಬೇಡಿಕೊಳ್ಳುವುದೇನೂ ಬೇಡ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದರು ಎಂದು ಅವರು ಹೇಳಿದ್ದಾರೆ. ಇದು ಭಯಾನಕವಾಗಿದೆ. ಅವರು ಈ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ನಾನು ಎಲ್‌ ಜಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version