Home ಟಾಪ್ ಸುದ್ದಿಗಳು ಕಾಶ್ಮೀರದಲ್ಲಿ ಪ್ರತಿಭಟನೆಯ ವೀಡಿಯೋ ಸೆರೆ ಹಿಡಿದ ಆರೋಪ| ಪತ್ರಕರ್ತನ ಬಂಧನ

ಕಾಶ್ಮೀರದಲ್ಲಿ ಪ್ರತಿಭಟನೆಯ ವೀಡಿಯೋ ಸೆರೆ ಹಿಡಿದ ಆರೋಪ| ಪತ್ರಕರ್ತನ ಬಂಧನ

ಪುಲ್ವಾಮ: ಶ್ರೀನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಸಿಬ್ಬಂದಿಗಳು ತಮ್ಮ ಸಂಬಂಧಿಕರನ್ನು ಹತ್ಯೆ ನಡೆಸಿದ್ದನ್ನು ವಿರೋಧಿಸಿ ಪ್ರತಿಭಟನಾ ಸಭೆಯ ವೀಡಿಯೋವನ್ನು ವೈರಲ್ ಮಾಡಿದ ಆರೋಪದಲ್ಲಿ ಪತ್ರಕರ್ತರೊಬ್ಬರನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ದಿ ಕಾಶ್ಮೀರ್ ವಾಲ್ಲಾದ ಪತ್ರಕರ್ತ ಸಜಾದ್ ಗುಲ್ ಎಂದು ಗುರುತಿಸಲಾಗಿದೆ.

ಬುಧವಾರ ಭದ್ರತಾ ಸಿಬ್ಬಂದಿಗಳು ನಡೆಸಿದ ದಾಳಿಯಲ್ಲಿ ಸಜಾದ್ ಗುಲ್ ನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿತ್ತು.

ಈ ಮಧ್ಯೆ ಆರೋಪಿ ಗುಲ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 153 ಬಿ, 505 ಬಿ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿ ಸಜಾದ್ ಗುಲ್, ಸಲೀಂ ಪರ್ರೆ ಎಂಬಾತನ ಹತ್ಯೆ ವಿರೋಧಿಸಿ ನಡೆದ ಪ್ರತಿಭಟನೆಯ ವೀಡಿಯೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು.

Join Whatsapp
Exit mobile version