ಕಾಸರಗೋಡು| ಭಾರೀ ಮಳೆಗೆ ಆಟೋ ರಿಕ್ಷಾದ ಮೇಲೆ ಉರುಳಿ ಬಿದ್ದ ಮರ; ಅಪಾಯದಿಂದ ಪಾರಾದ ಚಾಲಕ

Prasthutha|

ಕಾಸರಗೋಡು : ಗುಡುಗು ಮಿಂಚು ಗಾಳಿ ಸಹಿತ ಭಾರೀ ಮಳೆಯಿಂದಾಗಿ ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರ ಉರುಳಿ ಬಿದ್ದ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪ ಮೊಗ್ರಾಲ್ ನಲ್ಲಿ ನಡೆದಿದೆ. ಪವಾಡ ಸದೃಶವಾಗಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

- Advertisement -

ಮರ ಉರುಳಿ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ  ಎರಡು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯ ಹಲವು ಕಡೆಗಳಲ್ಲಿ ಕೃಷಿ ಹಾನಿಯೂ ಉಂಟಾಗಿದೆ ಎಂದು ತಿಳಿದುಬಂದಿದೆ.

ಗಾಳಿಯ ಅಬ್ಬರಕ್ಕೆ ಹಲವೆಡೆ ಮರಗಳು  ಬಿದ್ದ ಕಾರಣ   ವಿದ್ಯುತ್ ಸಂಪರ್ಕ ಅಸ್ತವ್ಯಸ್ತ ಗೊಂಡಿದ್ದು,  ಬಹುತೇಕ ಕಡೆಗಳಲ್ಲಿ  ರಾತ್ರಿ  ಯಿಂದ ವಿದ್ಯುತ್  ಕಡಿತವುಂಟಾಗಿದೆ.

Join Whatsapp
Exit mobile version