Home ಟಾಪ್ ಸುದ್ದಿಗಳು ಕಾಸರಗೋಡು: ಪಂಚಾಯತ್ ಕ್ಲರ್ಕ್, ಅವರ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಪಂಚಾಯತ್ ಕ್ಲರ್ಕ್, ಅವರ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು : ಪಂಚಾಯತ್ ಕ್ಲರ್ಕ್ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚೀಮೇನಿ ಸಮೀಪದ ಚೆಂಬ್ರಕಾನ ದಲ್ಲಿ ನಡೆದಿದೆ.

ಚೆಂಬ್ರಕಾನ ದ ರಂಜಿತ್ ರವರ ಪತ್ನಿ ಸಜೀನಾ ( 34), ಮಕ್ಕಳಾದ ಗೌತಮ್ ( 9) ಮತ್ತು ತೇಜಸ್ ( 6) ಮೃತರು.

ಮಕ್ಕಳು ವಿಷ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಸಜೀನಾ ಕೈ ನರ ಕತ್ತರಿಸಿ ಬಳಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಜೀನಾ ಪೆರಿಂಗೋ ವಯಕ್ಕರ ಪಂಚಾಯತ್ ನ ಕ್ಲರ್ಕ್ ಆಗಿದ್ದರು. ಘಟನೆಯಲ್ಲಿ ಮಕ್ಕಳಿಗೆ ವಿಷ ಕೊಟ್ಟು ಆತ್ಮಹತ್ಯೆಗೈದ ಸಾಧ್ಯತೆ ಕಂಡುಬಂದಿದೆ.

ಚೀಮೇನಿ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ , ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version