Home ಟಾಪ್ ಸುದ್ದಿಗಳು ಕರಾವಳಿಯಾದ್ಯಂತ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

ಕರಾವಳಿಯಾದ್ಯಂತ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

ಮಂಗಳೂರು: ಮಂಗಳವಾರ ಶವ್ವಾಲ್ ಚಂದ್ರ ದರ್ಶನದ ನಂತರ ಇಂದು (ಬುಧವಾರ) ಈದ್ ಉಲ್ ಫಿತರ್ ಹಬ್ಬದ ಘೋಷಣೆಯಾಗಿತ್ತು.

ಮುಸ್ಲಿಂ ಬಾಂಧವರು ಉಡುಪಿ, ಉ.ಕ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ ನಡೆಸಿದರು.

ಈದ್ ನಮಾಝಿನ ನಂತರ ಮಸೀದಿ/ಈದ್ಗಾಗಳಲ್ಲಿ ಖುತ್ಬಾ (ಪ್ರಭಾಷಣ) ನೆರೆವೇರಿತು. ನಂತರ ಹಿರಿಯರು, ಕಿರಿಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯಗಳು ಕಂಡು ಬಂತು.

Join Whatsapp
Exit mobile version