ಕಾಸರಗೋಡು: ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆಯಾಗಿದೆ. ಸಂಜೆ 5ಕ್ಕೆ ಆರಂಭಗೊಂಡ ಮಳೆ ರಾತ್ರಿಯವರೆಗೂ ಸುರಿದು ಸೆಕೆಯಿಂದ ಬಸವಳಿದ ಜನರಿಗೆ ಚಳಿಯ ಸಿಂಚನ ನೀಡಿದೆ.
ನವೀಕರಣ ಕಾಮಗಾರಿ ನಡೆಯು ತ್ತಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರೋಡ್ನಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ದುಸ್ತರವಾಗಿದೆ.
ಉಪ್ಪಳ ರೈಲ್ವೇ ಗೇಟ್ ಸಮೀಪ ಚರಂಡಿಯಲ್ಲಿ ಮಣ್ಣು ತುಂಬಿ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹರಿದು ದ್ವಿಚಕ್ರ ವಾಹನ ಸಹಿತ ವಿವಿಧ ವಾಹನ ಸಂಚಾರ ದುಸ್ತರವಾಗಿದೆ.