ಸಿದ್ದಪ್ಪ ಬಾಳಪ್ಪ, ರಾಜು ಬಾಳ ನಾಯ್ಕ ಬಂಧಿತ ಆರೋಪಿಗಳು
ಕಾರವಾರ: ಬೆಳಗಾವಿಯಿಂದ ರಾಮನಗರ ಅನಮೂಡ ಮಾರ್ಗವಾಗಿ ಗೋವಾಕ್ಕೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಜೊಯಿಡಾ ತಾಲೂಕಿನ ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಸಿದ್ದಪ್ಪ ಬಾಳಪ್ಪ ಬೂದ್ನೂರು , ರಾಜು ಬಾಳ ನಾಯ್ಕ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಇವರು ದನದ ಮಾಂಸ ಮಾರಾಟದ ಮಾಲಕ ಬೆಳಗಾವಿಯ ಅಮೂಲ ಮೋಹನದಾಸ ಕಳಿಸಿದ 1930 ಕೆ.ಜಿ.ದನದ ಮಾಂಸವನ್ನು ಟಾಟಾ ವಾಹನದಲ್ಲಿ ಗೋವಾಕ್ಕೆ ಸಾಗಟ ಮಾಡುತ್ತಿದ್ದರು.
ರಾಮನಗರ ಬಳಿ ಗಸ್ತು ತಿರುಗುತ್ತಿದ್ದ ಎಎಸ್ ಐ ರಾಜಪ್ಪ ದೊಡ್ಡಮನಿ ಅವರು ವಾಹನ ಅನಮೂಡ ಕಡೆಗೆ ಸಾಗುತ್ತಿದ್ದಾಗ, ತಪಾಸಣೆಗೆ ಕೈ ಮಾಡಿದರು. ವಾಹನ ನಿಲ್ಲಿಸದೆ ವೇಗವಾಗಿ ಸಾಗಿದಾಗ ಅನುಮಾನ ಬಂದು , ವಾಹನವನ್ನು ರಾಮನಗರ ಮಸೀದಿ ಹತ್ತಿರ ಹಿಡಿದು ತಪಾಸಣೆ ಮಾಡಿದರು. ಪಿಎಸ್ ಐ ಮಹಾಂತೇಶ್ ಸಹ ಪಂಚರ ಸಹಿತ ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿದರು. ಟಾಟಾ ಯೋಧ ವಾಹನದಲ್ಲಿ 1930 ಕೆಜಿ ದನದ ಮಾಂಸ ಇರುವುದು ಪತ್ತೆಯಾಯಿತು . ಇದರ ಬೆಲೆ , 6,75,000.00 ಲಕ್ಷ ರೂ. ಎಂದು ತಿಳಿದು ಬಂದಿದೆ.ದನದ ಮಾಂಸ , 8 ಲಕ್ಷದ ಟಾಟಾ ಯೋಧ ವಾಹನ ವಶಕ್ಕೆ ಪಡೆಯಲಾಗಿದೆ.
ಮಾಲಕ ಅಮೂಲ ಮೋಹನದಾಸ ಮೇಲೆ ಸಹ ಪ್ರಕರಣ ದಾಖಲಿಸಲಾಗಿದೆ. ಪ್ರಿವೆಷನ್ ಕ್ಯಾಟಲ್ ಆ್ಯಕ್ಟ 2020 ಮತ್ತು 325 BNS ,192 (A) ಅಡಿ ಕೇಸ್ ಹಾಕಲಾಗಿದೆ
