Home ಟಾಪ್ ಸುದ್ದಿಗಳು ಮೈಸೂರು ಜಾಮಿಯಾ ಮಸೀದಿ ಮೇಲೆ ಕಲ್ಲು ತೂರಾಟ; ಕಿಟಕಿಯ ಗಾಜುಗಳಿಗೆ ಹಾನಿ

ಮೈಸೂರು ಜಾಮಿಯಾ ಮಸೀದಿ ಮೇಲೆ ಕಲ್ಲು ತೂರಾಟ; ಕಿಟಕಿಯ ಗಾಜುಗಳಿಗೆ ಹಾನಿ

ಮೈಸೂರು: ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಫೆಬ್ರವರಿ 9 ರಂದು ಮಧ್ಯರಾತ್ರಿ ಸುಮಾರು 12.30 ರ ಹೊತ್ತಿಗೆ ಇಲ್ಲಿನ ಜಾಮಿಯಾ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಹಂಪಾಪುರದಲ್ಲಿ ನಡೆದಿದೆ.

ಈ ಸಂದರ್ಭದಲ್ಲಿ ಮಸೀದಿಯ ಕಿಟಕಿಯ ಗಾಜುಗಳು ಪುಡಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರವನ್ನು ಮುಂದಿಟ್ಟು ಧ್ವೇಷ ಸಾಧಿಸಲು ಈ ಕುಕೃತ್ಯವೆಸಗಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

‘ನಾನು ಮಸೀದಿಯಲ್ಲಿ ಮಲಗಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಕಲ್ಲು ತೂರಾಟ ನಡೆಸಿ ಮಸೀದಿಯ ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದರು’ ಎಂದು ಜಾಮೀಯ ಮಸೀದಿಯ ಇಮಾಮ್ ಮುಹಮ್ಮದ್ ಮುಝಾಮ್ಮಿಲ್ ಅಥಾರ್ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version