Home ಟಾಪ್ ಸುದ್ದಿಗಳು ಬೆಳಂದೂರು ಬೀದಿ ಬದಿ ವ್ಯಾಪಾರಿಯ ತಳ್ಳುಗಾಡಿಯನ್ನು ನಾಶಪಡಿಸಿದ ಗ್ರಾಪಂ ನಡೆಗೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು...

ಬೆಳಂದೂರು ಬೀದಿ ಬದಿ ವ್ಯಾಪಾರಿಯ ತಳ್ಳುಗಾಡಿಯನ್ನು ನಾಶಪಡಿಸಿದ ಗ್ರಾಪಂ ನಡೆಗೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಆಕ್ರೋಶ

ಬೆಂಗಳೂರು: ಬೆಳಂದೂರು ಗ್ರಾಮದ ಬಡಪಾಯಿ ರಝಾಕ್ ಅಂಕಜಾಲು ಅವರ ತಳ್ಳುಗಾಡಿ ಅಂಗಡಿಯನ್ನು ಅಧಿಕಾರಿಗಳ ತಂಡವೊಂದು ಬೆಳ್ಳಂಬೆಳಗ್ಗೆ ತರಾತುರಿಯಲ್ಲಿ ಬಂದು ನೆಲಸಮ ಮಾಡಿ ದುಷ್ಕೃತ್ಯ ಎಸಗಿದೆ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶೀಘ್ರವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷ ಜಾಬೀರ್ ಆತ್ತಾಸ್ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಕಾರ್ಯಾಧ್ಯಕ್ಷ ಜಾಬೀರ್ ಆತ್ತಾಸ್

ಅಧಿಕಾರಿಗಳು ಶೀಘ್ರವೇ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ, ಕನ್ನಡಪರ ಹೋರಾಟಗಾರರು ಹಾಗೂ ರೈತಪರ ಹೋರಾಟಗಾರರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version