Home ಟಾಪ್ ಸುದ್ದಿಗಳು ಲಂಚಕ್ಕೆ ಬೇಡಿಕೆ: ಕೇರಳದಲ್ಲಿ ಕರ್ನಾಟಕ ಪೊಲೀಸರ ಬಂಧನ

ಲಂಚಕ್ಕೆ ಬೇಡಿಕೆ: ಕೇರಳದಲ್ಲಿ ಕರ್ನಾಟಕ ಪೊಲೀಸರ ಬಂಧನ

ಬೆಂಗಳೂರು: ಆರೋಪಿಯನ್ನು ಬಂಧನ ಮಾಡದೇ ಇರಲು 4 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಕರ್ನಾಟಕದ ನಾಲ್ವರು ಪೊಲೀಸರನ್ನು ಕೇರಳದ ಕೊಚ್ಚಿಯಲ್ಲಿ ಅರೆಸ್ಟ್ ಮಾಡಲಾಗಿದೆ.


ಬಂಧಿತರು ಬೆಂಗಳೂರು ವೈಟ್ ಫೀಲ್ಡ್ ಸೆನ್ ಪೊಲೀಸರಾಗಿದ್ದಾರೆ.
ಇವರನ್ನು ಕೊಚ್ಚಿಯ ಕಲಂಚೇರಿ ಪೊಲೀಸರು ಬಂಧಿಸಿದ್ದಾರೆ. ಆನ್ಲೈನ್ ವಂಚನೆ ಕೇಸ್ ರಿಕವರಿಗೆ ಹೋಗಿದ್ದಾಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.


ಶಿವಪ್ರಕಾಶ್, ಶಿವಾನಿ, ವಿಜಯ್ ಕುಮಾರ್, ಸಂದೇಶ್ ಬಂಧನಕ್ಕೊಳಗಾದ ಪೊಲೀಸರು.


ಉದ್ಯೋಗ ಕೊಡಿಸುವುದಾಗಿ ಇಂಜಿನಿಯರ್ ಗೆ ಮೋಸವಾಗಿತ್ತು. ಚಂದಕ್ ಶ್ರೀಕಾಂತ್ ಎಂಬಾತ ಈ ಸಂಬಂಧ ದೂರು ಕೊಟ್ಟಿದ್ದ. ಆನ್ ಲೈನ್ ಮೂಲಕ 26 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದ. ಈ ಪ್ರಕರಣ ತನಿಖೆಯನ್ನು ವೈಟ್ ಫೀಲ್ಡ್ ಸಿಇಎನ್ ಪೊಲೀಸರು ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್ ನಲ್ಲಿ 2 ಕೋಟಿ ವರ್ಗಾವಣೆಯಾಗಿರುವುದು ಪತ್ತೆಯಾಯಿತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ ಕೇರಳಕ್ಕೆ ಹೊರಟಿತ್ತು.


ನೌಶಾದ್ ಎಂಬವನಿಂದ ಆನ್ಲೈನ್ ಫ್ರಾಡ್ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಅರೆಸ್ಟ್ ಮಾಡಲು ತೆರಳಿದ್ದ ವೈಟ್ ಫೀಲ್ಡ್ ಸಿಇಎನ್ ಪೊಲೀಸರು, ಬಂಧಿಸದೇ ಇರಲು 3 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದಲ್ಲಿ ತನಿಖೆಗೆ ಎಂದು ಬಂದಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದರು. ಇನ್ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಎಫ್ ಐಆರ್ ದಾಖಲಿಸಲಾಗಿದೆ.

Join Whatsapp
Exit mobile version