ಮುಂಬೈ: ನಗರದ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದಕ್ಕೆ ಅವರನ್ನು ಕ್ಯಾಂಪಸ್ ಗೆ ಪ್ರವೇಶಿಸಲು ನಿರ್ಬಂಧಿಸಲಾಗಿದ್ದು, ಬಳಿಕ ಪೋಷಕರು, ವಿದ್ಯಾರ್ಥಿಗಳು ಮತ್ತು ಪೊಲೀಸರ ಹಸ್ತಕ್ಷೇಪದ ನಂತರ ಅವರಿಗೆ ಪ್ರವೇಶ ನೀಡಲಾಯಿತು.
ಘಟನೆ ಚೆಂಬೂರಿನ ಕಾಲೇಜಿನಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಬುಧವಾರ ಕಾಲೇಜಿನ ಗೇಟಿನ ಹೊರಗೆ ವಿದ್ಯಾರ್ಥಿನಿಯರು, ಅವರ ಹೆತ್ತವರೆಲ್ಲ ಸೇರಿರುವುದು ಹಾಗೂ ಅಲ್ಲಿ ಗೊಂದಲ ಸೃಷ್ಟಿಯಾಗಿರುವ ವೀಡಿಯೋಗಳು ಹರಿದಾಡಿದ ನಂತರ ಸ್ಥಳಕ್ಕೆ ಪೊಲೀಸರು ಧಾವಿಸಿದ್ದರು. ಹೆತ್ತವರು ಮತ್ತು ಕಾಲೇಜು ಆಡಳಿತದೊಂದಿಗೆ ಪೊಲೀಸರು ನಂತರ ಚರ್ಚೆ ನಡೆಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
https://twitter.com/Doodiedcewc/status/1686944142960807936?ref_src=twsrc%5Etfw%7Ctwcamp%5Etweetembed%7Ctwterm%5E1686944142960807936%7Ctwgr%5E1ebc89d73fd78f3d7392c1c2d6d40e9a5b38f93f%7Ctwcon%5Es1_c10&ref_url=https%3A%2F%2Fwww.varthabharati.in%2FNational%2Fgirl-students-in-burqa-stopped-from-entering-mumbai-college-allowed-after-protest-1952643