Home ಮಾಹಿತಿ ಕರ್ನಾಟಕ ಲೋಕಾಯುಕ್ತದಲ್ಲಿ 30 ಕ್ಲರ್ಕ್ ಕಂ ಟೈಪಿಸ್ಟ್ ನೇಮಕ

ಕರ್ನಾಟಕ ಲೋಕಾಯುಕ್ತದಲ್ಲಿ 30 ಕ್ಲರ್ಕ್ ಕಂ ಟೈಪಿಸ್ಟ್ ನೇಮಕ

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್-ಸಿ ವೃಂದದ ಉಳಿಕೆ ಮೂಲ ವ್ಯಂದದಲ್ಲಿ ಖಾಲಿ ಇರುವ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ ವೃಂದ) ವೃಂದದಲ್ಲಿ ಖಾಲಿ ಇರುವ ಕರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.


ಈ ಮೇಲಿನ ಹುದ್ದೆಗಳಿಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ವೆಬ್ಸೈಟ್ https://lokayukta.kar.nic.in ನಲ್ಲಿ online ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿಗಳನ್ನು ಆನ್-ಲೈನ್ (on-line) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.


ಶೈಕ್ಷಣಿಕ ವಿದ್ಯಾರ್ಹತೆ
• ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ.
• ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆ.
• (ಮೂಲ ಅಂಕಪಟ್ಟಿಯನ್ನು ಅರ್ಹತಾ ಪರೀಕ್ಷೆಗೆ ಕರೆ ಬಂದಾಗ ಪರಿಶೀಲನೆಗಾಗಿ ಹಾಜರುವಡಿಸುವುದು).
• ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಕಮರ್ಷಿಯಲ್ ಪ್ರಾಕ್ಸಿಸ್ನ ಬೆರಳಚ್ಚು ವಿಷಯಗಳ ತೇರ್ಗಡೆಯ ತತ್ಸಮಾನತೆ ಬಗ್ಗೆ ಸರ್ಕಾರದ ಅದೇಶ ಸಂಖ್ಯೆ: ಇಡಿ 174 ಟಿಪಿಇ 2005 ಬೆಂಗಳೂರು, ದಿನಾಂಕ:09ನೇ ನವೆಂಬರ್ 2006 ರನ್ವಯ ವರಿಗಣಿಸಲಾಗುವುದು.


ನೇಮಕಾತಿ ಪಕ್ರಿಯೆ ಹೇಗಿರುತ್ತದೆ?
• ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) (ತಿದ್ದುವಡಿ) ನಿಯಮಗಳು 20050 ಅನುಬಂಧ-‘ಎ’ ರಲ್ಲಿ ತಿಳಿಸಿದಂತೆ ಕ್ಲರ್ಕ್-ಕಂ-ಟೈಪಿಸ್ ಹುದ್ದೆಗೆ ನಿಗಧಿಪಡಿಸಲಾದ ವಿದ್ಯಾರ್ಹತೆಯಲ್ಲಿ ನಡೆದ ಅಂಕಗಳ ಮತ್ತು ಮೀಸಲಾತಿ ಆಧಾರದ ಮೇರೆಗೆ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳ ಪೈಕಿ 1:10 ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಸದರಿ ಪಟ್ಟಿಯಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಛೇರಿಯಿಂದ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಸದರಿ ಅರ್ಹತಾ ಪರೀಕ್ಷೆಗೆ ನಿಗಧಿಪಡಿಸಲಾದ ಗರಿಷ್ಠ 20 ಅಂಕಗಳಿಗೆ ಅಭ್ಯರ್ಥಿಯು ಕನಿಷ್ಕ ಶೇ.50 ರಷ್ಟು ಅಂಕಗಳನ್ನು ಪಡೆದಲ್ಲಿ ಮಾತ್ರ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು.


• ಅರ್ಹತಾ ಪರೀಕ್ಷೆಯನ್ನು ಬೆರಳಚ್ಚು ಯಂತ್ರ / ಗಣಕಯಂತ್ರದ ಮೂಲಕ ಕೈಗೊಳ್ಳಲಾಗುವುದು.


ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ
ನಿಗದಿತ ಶುಲ್ಕವನ್ನು ಕರ್ನಾಟಕ ಲೋಕಾಯುಕ್ತ ಕಚೇರಿಯ ಅಧಿಕೃತ ವೆಬ್ಸೈಟ್ https://lokavukta.kar.nic.in ರಲ್ಲಿ ನೀಡಲಾದ ಲಿಂಕ್ ಮುಖಾಂತರ ಕೆನರಾ ಬ್ಯಾಂಕ್ನ CANARA Collect ಮೂಲಕ ನಿಗದಿತ ಶುಲ್ಕವನ್ನು Online Payment through Canara e pay modes/ Net Banking or Credit or Debit Card or UPI ID ಸೌಲಭ್ಯದ ಮೂಲಕ ಮಾತ್ರ ಪಾವತಿಸತಕ್ಕದ್ದು.


ಅರ್ಜಿ ಶುಲ್ಕ ಮಾಹಿತಿ
ಸಾಮಾನ್ಯ ವರ್ಗ, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳಿಗೆ, ಮಾಜಿ ಸೈನಿಕರಿಗೆ ರೂ.250.
ಎಸ್ಸಿ / ಎಸ್ಟಿ / ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ ಇದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/11/2024 (ಮಧ್ಯರಾತ್ರಿ 11:59 ಗಂಟೆಯವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 30/11/2024 (ಮಧ್ಯರಾತ್ರಿ 11:59 ಗಂಟೆಯವರೆಗೆ).

Join Whatsapp
Exit mobile version