Home ಟಾಪ್ ಸುದ್ದಿಗಳು ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ನಲ್ಲಿ 320 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ನಲ್ಲಿ 320 ಹುದ್ದೆಗಳಿಗೆ ಅರ್ಜಿ ಆಹ್ವಾನ

KHPT Logo

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ ಪ್ರಾಯೋಜಿತನ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ Karnataka Health Promotion Trust – (KHPT) ಇದರ ಎರಡು ಪ್ರಮುಖ ಯೋಜನೆಗಳಾದ ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ GRAAMA PANCHAYATH AROGYA AMRUTHA ABHIYAANA ಹಾಗೂ ಹದಿಹರಯದವರ ಆರೋಗ್ಯ ಅಭಿಯಾನ ADOLESCENT HEALTH ಕಾರ್ಯಕ್ರಮ ಅನುಷ್ಠಾನಕ್ಕಾಗಿ ವಿವಿಧ 320 ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.


ಹದಿಹರಯದ ಆರೋಗ್ಯ ಯೋಜನೆ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ, ಗ್ರಾಮಪಂಚಾಯತ್ ಅಮೃತ್ ಆರೋಗ್ಯ ಅಭಿಯಾನ ಯೋಜನೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಮತ್ತು ಎಲ್ಲ ತಾಲೂಕುಗಳಿಗೆ ನೇಮಕ ನಡೆಯಲಿದೆ. ಒಟ್ಟು 37 ಜಿಲ್ಲಾ ಕಾರ್ಯಕ್ರಮ ಸಂಯೋಜಕರು, 255 ತಾಲೂಕು ಸಂಯೋಜಕರು, ಕ್ಷೇತ್ರ ಸಂಯೋಜಕರು, ಸಂವಹನ ಮತ್ತು ದಾಖಲಾತಿ ಅಧಿಕಾರಿ ನೇಮಕಾತಿ ಸೇರಿದ್ದು , 10 ಸಾವಿ ರೂ.ನಿಂದ 35 ಸಾವಿರ ತನಕ ವೇತನ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.khpt.org/work-with-us ವೆಬ್ ಸೈಟ್ ಸಂಪರ್ಕಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಮೇ 2022 ಆಗಿದೆ. ಅರ್ಜಿ ಮಾದರಿ ವೈಬ್ ಸೈಟಿನಲ್ಲೆ ಲಭ್ಯವಾಗಲಿದೆ.


ನೇಮಕಾತಿ ವಿವರಗಳು

  1. ಜಿಲ್ಲಾ ಕಾರ್ಯಕ್ರಮ ಸಂಯೋಜಕರು: ಒಟ್ಟು ಹುದ್ದೆಗಳು- 37
    ಸಾಮಾಜಿಕ ಸೇವಾ ಶಾಸ್ತ್ರ ಅಥವಾ ತತ್ಸಮಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ. ಕನಿಷ್ಟ 6ರಿಂದ 10 ವರ್ಷಗಳ ಕ್ಷೇತ್ರಾನುಭವ. ವೇತನ: 25 ಸಾವಿರ ರೂ.
  2. ತಾಲೂಕು ಸಂಯೋಜಕರು Taluka Coordinator: ಒಟ್ಟು ಹುದ್ದೆಗಳು 255:
    ಸಾಮಾಜಿಕ ಸೇವಾ ಶಾಸ್ತ್ರ ಅಥವಾ ತತ್ಸಮಾನ ವಿಷಯಗಳಲ್ಲಿ ಪದವಿ/ಸ್ನಾತಕೋತ್ತರ ಪದವಿ. ಕನಿಷ್ಟ ೪-೫ ವರ್ಷಗಳ ಕ್ಷೇತ್ರಾನುಭವ. ವೇತನ: 18 ಸಾವಿರದಿಂದ 23 ಸಾವಿರ [ನೆಗೊಶಿಯೇಬಲ್]
  3. ಕ್ಷೇತ್ರ ಸಂಯೋಜಕರು (ಕ್ಷೇತ್ರಕ್ಕೆ ಒಬ್ಬರಂತೆ): ಒಟ್ಟು ಹುದ್ದೆಗಳು 17
    ಸಾಮಾಜಿಕ ಸೇವಾ ಶಾಸ್ತ್ರ ಅಥವಾ ತತ್ಸಮಾನ ವಿಷಯಗಳಲ್ಲಿ ಪದವಿ. ಕನಿಷ್ಠ 3 ವರ್ಷಗಳ ಸೇವಾನುಭವ. ವೇತನ: 15 ಸಾವಿರದಿಂದ 18 ಸಾವಿರ [ನೆಗೊಶಿಯೇಬಲ್]
  4. ಸಂವಹನ ಮತ್ತು ದಾಖಲಾತಿ ಅಧಿಕಾರಿ (ವಲಯಕ್ಕೆ ಒಬ್ಬರಂತೆ) : ಒಟ್ಟು ಹುದ್ದೆಗಳು ಅಭಿವೃದ್ಧಿ ಸಂವಹನ, ಪತ್ರಿಕೋದ್ಯಮ, ಅಂತರ್ಜಾಲ/ಗ್ರಾಫಿಕ್ ಅಥವಾ ತತ್ಸಮಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ. ದಾಖಲಾತಿ / ಸಾಮಾಜಿಕ ಅಭಿವೃದ್ಧಿ ಸೇವಾ ನಿರ್ವಹಣೆಯಲ್ಲಿ ಕನಿಷ್ಟ ೩ ವರ್ಷಗಳ ಸೇವಾನುಭವ. ವೇತನ: 25 ಸಾವಿರದಿಂದ 28 ಸಾವಿರ [ಸಮಾಲೋಚನಾಧಾರಿತ]
    ದತ್ತಾಂಶ ನಿರ್ವಹಣೆ ಹಾಗು ನಮೂದಕರು data Entry operator : ಒಟ್ಟು ಹುದ್ದೆಗಳು 6: ಯಾವುದೇ ಅನ್ವಯಿಕ ಪದವಿ. ದತ್ತಾಂಶ ದಾಖಲಾತಿಯಲ್ಲಿ ಕನಿಷ್ಟ 3-4 ವರ್ಷಗಳ ಅನುಭವ
    ವೇತನ: 10 ಸಾವಿರದಿಂದ 14 ಸಾವಿರ [ನೆಗೊಶಿಯೇಬಲ್]
    ಮಾಹಿತಿ ವ್ಯವಸ್ಥೆ ಉಸ್ತುವಾರಿ/ದತ್ತಾಂಶ ನಿರ್ವಹಣೆ (MIS)ಒಟ್ಟು ಹುದ್ದೆ 5
    ಕಂಪ್ಯೂಟರ್ ಸೈನ್ಸ್/ವಿಜ್ಞಾನ/ತಂತ್ರಜ್ಞಾನದಲ್ಲಿ ಪದವಿ ಅಥವಾ ತತ್ಸಮಾನ ಅರ್ಹತೆ. ಸಾಮಾಜಿಕ ಅಭಿವೃದ್ಧಿ ವಲಯದಲ್ಲಿ ಕನಿಷ್ಟ ವರ್ಷಗಳ ಸೇವಾನುಭವ. ವೇತನ: 18 ಸಾವಿರದಿಂದ 20 ಸಾವಿರ [ಸಮಾಲೋಚನಾಧಾರಿತ]
    ಅರ್ಜಿ ಸಲ್ಲಿಕೆ ಹೇಗೆಃ KHPT ವೆಬ್ ಸೈಟ್ ಮೂಲಕ ನೇರ ಅರ್ಜಿ ಸಲ್ಲಿಸಬಹುದು.
    ನೇಮಕ ಪ್ರಕ್ರಿಯೆಃ ಅರ್ಹತೆ, ಅನುಭವ ಮೇರೆಗೆ ಅಭ್ಯರ್ಥಿಗಳ ಸಂದರ್ಶನಕ್ಕೆ ಕರೆಯಲಾಗುವುದು. ನೇರ ಸಂದರ್ಶನ ದಿನಾಂಕ ಮೇ ಕೊನೆಯ ವಾರ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31ಮೇ 2022 ಅರ್ಜಿ ಸಲ್ಲಿಸುವ ಆರಂಭಿಕ ದಿನಾಂಕ 20 ಮೇ 2022
    ಹೆಚ್ಚಿನ ಮಾಹಿತಿ ಮತ್ತು ಅರ್ಜಿ ನಮೂನೆಗಾಗಿ ಈ ಲಿಂಕ್ ಬಳಸಿ.

Field Coordinator, Health MSW jobsforMSW: ಬಾಗಲಕೋಟೆ, ಬಳ್ಳಾರಿ, ವಿಜಯನಗರ ಬೆಳಗಾವಿ, ಗದಗ, ಚಾಮರಾಜನಗರ,ದಾವಣಗೆರೆ, ಕಲ್ಬುರ್ಗಿ, ಹಾವೇರಿ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ವಿಜಯಪುರ ಯಾದಗಿರಿ ದಕ್ಷಿಣ ಕನ್ನಡಿ , ಮಂಗಳೂರು ಉಡುಪಿ, ಕೊಡಗು ಚಿಕ್ಕಮಗಳೂರು, ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ, ಕಾರವಾರ, ಮೈಸೂರು ಬೆಂಗಳೂರು, ತುಮಕೂರು

Join Whatsapp
Exit mobile version