Home ಟಾಪ್ ಸುದ್ದಿಗಳು ಕರವೇ ನಾರಾಯಣ ಗೌಡ ನಾಳೆ ಬಿಡುಗಡೆ

ಕರವೇ ನಾರಾಯಣ ಗೌಡ ನಾಳೆ ಬಿಡುಗಡೆ

ಬೆಂಗಳೂರು: ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಬಂಧನಕ್ಕೊಳಾಗಿಗರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡಗೆ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದ್ದು, ಸೋಮವಾರ ರಿಲೀಸ್ ಆಗಲಿದ್ದಾರೆ.

ಜಾಮೀನು ಕೋರಿ ನಾರಾಯಣ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಮಂಗಳವಾರ ತೀರ್ಪು ಕಾಯ್ದಿರಿಸಿತ್ತು.

ಡಿಸೆಂಬರ್ 27ರಂದು ಬೆಂಗಳೂರಿನಲ್ಲಿ ಕನ್ನಡ ನಾಮಫಲಕಕ್ಕೆ ಆಗ್ರಹಿಸಿದ
ಪ್ರತಿಭಟನೆ ವೇಳೆ ಕನ್ನಡಪರ ಕಾರ್ಯಕರ್ತರು ಬೃಹತ್ ಪ್ಲೆಕ್ಸ್ ಗಳನ್ನು ಹರಿದು ಹಾಕಿದ್ದರು. ಬೋರ್ಡ್‌ಗಳನ್ನು ಒಡೆದು ಹಾಕಿದ್ದರು. ಸಾರ್ವಜನಿಕ ಅಸ್ತಿಪಾಸ್ತಿ ಹಾಳು ಮಾಡಿದ ಆರೋಪದ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕರವೇ ನಾರಾಯಣ ಗೌಡ ಸೇರಿದಂತೆ 29 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಹೆದ್ದಾರಿ ತಡೆ, ಸಾರ್ವಜನಿಕ ಅಸ್ತಿ ಹಾನಿ ಮತ್ತು ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂರು ಪ್ರಕರಣಗಳು ದಾಖಲಾಗಿದ್ದವು.

ನಾರಾಯಣ ಗೌಡ ಪರ ವಕೀಲ ಕುಮಾರ್, ಗೌಡ್ರು ಸೋಮವಾರ ಜೈಲಿಂದ ರಿಲೀಸ್ ಆಗ್ತಾರೆ, ಬೇಲ್ ಅಪ್ಲಿಕೇಶನ್ ಗೆ ಸಾಕಷ್ಟು ಪ್ರೊಸೀಜರ್ಗಳು ಇರುವ ಕಾರಣ ಸೋಮವಾರ ಗೌಡ್ರು ಹಾಗೂ ಕಾರ್ಯಕರ್ತರು ಪರಪ್ಪನ ಅಗ್ರಹಾರದಿಂದ ರಿಲೀಸ್ ಆಗ್ತಾರೆ ಎಂದು ತಿಳಿಸಿದ್ದಾರೆ.

Join Whatsapp
Exit mobile version