ಗಾಝಾ: ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಪ್ರಸ್ತುತ ದಾಳಿಯಲ್ಲಿ ಇದುವರೆಗೆ 22,722 ಮಂದಿ ಮೃತಪಟ್ಟಿದ್ದಾರೆ ಎಂದು ಗಾಝಾದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ ಗಾಝಾ ಪಟ್ಟಿಯಲ್ಲಿ ಶತ್ರುಗಳ ವೈಮಾನಿಕ ದಾಳಿಯಲ್ಲಿ 122 ಮಂದಿ ಸಾವನ್ನಪ್ಪಿದ ಬಳಿಕ ಈ ಅಂಕಿಅಂಶವನ್ನು ಗಾಝಾದ ಆರೋಗ್ಯ ಇಲಾಖೆ ನೀಡಿದೆ.
ಸುಮಾರು 3 ತಿಂಗಳಿಂದ ಗಾಝಾದ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದು, ಕದನ ವಿರಾಮಕ್ಕೆ ವಿಶ್ವ ಸಂಸ್ಥೆಯಿಂದ, ಅಂತಾರಾಷ್ಟ್ರೀಯ ಮಟ್ಟದಿಂದ ಒತ್ತಾಯ ಬರುತ್ತಿದ್ದರೂ ಇಸ್ರೇಲ್ ಅದಕ್ಕೆ ಬೆಲೆ ಕೊಡದೇ ದಾಳಿ ಮುಂದುವರೆಸುತ್ತಿದೆ. ಗಾಝಾ ಪಟ್ಟಿಯಲ್ಲಿ 58,166 ಮಂದಿ ಗಾಯಗೊಂಡಿದ್ದಾರೆ ಎಂದೂ ಗಾಝಾದ ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ