Home ಟಾಪ್ ಸುದ್ದಿಗಳು ಕಾಂತಪುರಂ ಎ.ಪಿ. ಉಸ್ತಾದರನ್ನು ಭೇಟಿಯಾದ ಕೇರಳ CM  ಪಿಣರಾಯಿ ವಿಜಯನ್

ಕಾಂತಪುರಂ ಎ.ಪಿ. ಉಸ್ತಾದರನ್ನು ಭೇಟಿಯಾದ ಕೇರಳ CM  ಪಿಣರಾಯಿ ವಿಜಯನ್

ಕೋಝಿಕ್ಕೋಡ್:  ಖ್ಯಾತ ಮುಸ್ಲಿಮ್ ವಿದ್ವಾಂಸ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೋಝಿಕ್ಕೋಡ್ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳು ಉಸ್ತಾದರ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಕಾಂತಪುರಂ ಉಸ್ತಾದ್ ಅವರನ್ನು ಭೇಟಿಯಾದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್,  ಮುಖ್ಯಮಂತ್ರಿಗಳ  ಭೇಟಿ ಹಾಗೂ ಭರವಸೆ ತುಂಬಿದ ಮಾತುಕತೆ ತುಂಬಾ ಸಂತೋಷವನ್ನುಂಟು ಮಾಡಿದೆ. ಕೆಲ ದಿನಗಳಿಂದ ಮುಖ್ಯಮಂತ್ರಿಗಳು ದೂರವಾಣಿ ಮೂಲಕ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದು, ಇದೀಗ ಬಿಡುವು ಮಾಡಿಕೊಂಡು ಮುಖತಃ  ಭೇಟಿಯಾಗಲು ಆಗಮಿಸಿದ ಮುಖ್ಯಮಂತ್ರಿಗಳಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

ದೇಶಾದ್ಯಂತ ಹಲವಾರು ಧಾರ್ಮಿಕ, ಶೈಕ್ಷಣಿಕ, ಸಂಘಟನಾ ಚಳುಳಿಗಳಾಗಿರುವ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ವಯೋಸಹಜ ಅನಾರೋಗ್ಯದ ನಂತರದ ನಂತರ ವಿಶ್ರಾಂತಿಯಲ್ಲಿದ್ದಾರೆ.

ಕೇರಳದ ಕಲ್ಲಿಕೋಟೆಯ ಜಾಮಿಅಃ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಾ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮರ್ಕಝ್ ನಾಲೆಡ್ಜ್ ಸಿಟಿಯ ಸ್ಥಾಪಕರಾಗಿರುವ ಕಾಂತಪುರಂ ಉಸ್ತಾದರು ವಿದೇಶಗಳಲ್ಲಿ ನಡೆಯುವ ಹಲವಾರು ಇಸ್ಲಾಮಿಕ್ ಕಾರ್ಯಕ್ರಮಗಳಿಗೆ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಈ ನಿಟ್ಟಿನಲ್ಲಿ  ಇದೀಗ ವಿಶ್ರಾಂತಿಯಲ್ಲಿರುವ ಎ.ಪಿ ಉಸ್ತಾದರನ್ನು ಹಲವಾರು ಜಾಗತಿಕ ನಾಯಕರು ಭೇಟಿಯಾಗಲು ಕೇರಳಕ್ಕೆ ಆಗಮಿಸುತ್ತಿದ್ದಾರೆ.

ಶುಕ್ರವಾರ ಕೇರಳಕ್ಕೆ  ಆಗಮಿಸಿದ್ದ ಬಾಗ್ದಾದ್’ನ ಖ್ಯಾತ ವಿದ್ವಾಂಸ  ಶೈಖ್ ಅಫೀಫುದ್ದೀನ್ ಜೀಲಾನಿಯವರು ಕಾಂತಪುರಂ ಉಸ್ತಾದರನ್ನು ಭೇಟಿ ಮಾಡಿದ್ದು, ಜುಮುಆ ಖುತುಬಾ, ನಮಾಝ್ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.

Join Whatsapp
Exit mobile version