Home ಟಾಪ್ ಸುದ್ದಿಗಳು ಆಂಧ್ರ| ವೈಎಸ್’ಆರ್’ಸಿಪಿ, ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ, ಸೆಕ್ಷನ್ 144 ಜಾರಿ

ಆಂಧ್ರ| ವೈಎಸ್’ಆರ್’ಸಿಪಿ, ಟಿಡಿಪಿ ಕಾರ್ಯಕರ್ತರ ನಡುವೆ ಘರ್ಷಣೆ, ಸೆಕ್ಷನ್ 144 ಜಾರಿ

ಹೈದರಾಬಾದ್ : ವಿರೋಧ ಪಕ್ಷವು “ಇಡೆಮಿ ಕರ್ಮಾ ರಾಷ್ಟ್ರನಿಕಿ” (“Idem Kharma Rashtraniki”) ಕಾರ್ಯಕ್ರಮದ ಭಾಗವಾಗಿ ನಡೆಸಿದ ಜಾಥಾದಲ್ಲಿ ಆಡಳಿತಾರೂಢ ವೈಎಸ್’ಆರ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ  ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ಪಲ್ನಾಡು ಜಿಲ್ಲೆಯ ಮಾಚೆರ್ಲಾ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಮತ್ತು ಕಚೇರಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತನ್ನ ನಾಯಕರ ವಾಹನಗಳು ಹಾಗೂ ಮನೆಗಳಿಗೆ ವೈಎಸ್’ಆರ್’ಸಿಪಿ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ ಎಂದು ಟಿಡಿಪಿ ಆರೋಪಿಸಿದ್ದರೆ, ಘರ್ಷಣೆಯಲ್ಲಿ ತನ್ನ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ವೈಎಸ್ ಆರ್’ಸಿಪಿ  ಹೇಳಿಕೊಂಡಿದೆ.

ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಘರ್ಷಣೆ ನಿರತ ಗುಂಪನ್ನು ಚದುರಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಪಲ್ನಾಡು ಪೊಲೀಸ್ ವರಿಷ್ಠಾಧಿಕಾರಿ ವೈ. ರವಿಶಂಕರ ರೆಡ್ಡಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಟಿಡಿಪಿ ನಾಯಕ ಜುಲಕಂತಿ ಬ್ರಹ್ಮ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರೆಡ್ಡಿ ಕಾರ್ಯಕ್ರಮದ ನೇತೃತ್ವವನ್ನು ವಹಿಸುತ್ತಿದ್ದಾಗ ಹಿಂಸಾಚಾರ ಭುಗಿಲೆದ್ದಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Join Whatsapp
Exit mobile version