Home Uncategorized ವಿರಾಜಪೇಟೆ | ಶಂಸುಲ್ ಉಲೆಮಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಕಂಪು

ವಿರಾಜಪೇಟೆ | ಶಂಸುಲ್ ಉಲೆಮಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಕಂಪು

ವಿರಾಜಪೇಟೆ: ಪೆರುಂಬಾಡಿಯ ಶಂಸುಲ್ ಉಲಮಾ ಎಜುಕೇಶನಲ್ ಅಕಾಡಮಿ ಟ್ರಸ್ಟ್ ನ ಮಹಿಳಾ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಆಗಮಿಸಿದ ಗದಗ ಜಿಲ್ಲಾ ನ್ಯಾಯಾಧೀಶರಾದ ಸಲ್ಮಾ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ, ಎಲ್ಲರೂ ಶಿಕ್ಷಣದೊಂದಿಗೆ ಕಾನೂನು ಅರಿವಿನ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಸಹಕಾರಿಯಾಗಲಿದೆ, ಉಚಿತ ಕಾನೂನು ನೆರವು ಅರಿವು ಕಾರ್ಯಕ್ರಮದ ಪ್ರಯೋಜನ ಪಡೆದು ಪ್ರತಿಯೊಬ್ಬರೂ ಕಾನೂನಿನ ಪ್ರಾಥಮಿಕ ಜ್ಞಾನ ಪಡೆಯಬೇಕು ಎಂದರು. ಈ ಸಂದರ್ಭ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ವೇಳೆ ಕಾಲೇಜು ಪ್ರಾಂಶುಪಾಲೆ ಭಾನುಮತಿ, ಉಪನ್ಯಾಸಕಿ ಆಶಾ, ಆಡಳಿತ ಮಂಡಳಿ ಅಧ್ಯಕ್ಷ ಸಿ. ಪಿ. ಎಂ ಬಶೀರ್ ಹಾಜಿ, ಕಾರ್ಯದರ್ಶಿ ಹುಸೈನ್, ಸದಸ್ಯರುಗಳಾದ ಮುಸ್ತಫಾ, ಬಶೀರ್ ಸೇರಿದಂತೆ ಮತ್ತಿತರರು ಹಾಜರಿದ್ದರು

Join Whatsapp
Exit mobile version