Home ಟಾಪ್ ಸುದ್ದಿಗಳು ಕಾಣಿಯೂರು ಜವಳಿ ವ್ಯಾಪಾರಿಗಳಿಗೆ ಮಾರಣಾಂತಿಕ ಹಲ್ಲೆ: ಆಸ್ಪತ್ರೆಗೆ ರಾಜಕೀಯ ಮತ್ತು ಸಾಮಾಜಿಕ ಮುಖಂಡರ ನಿಯೋಗ ಭೇಟಿ

ಕಾಣಿಯೂರು ಜವಳಿ ವ್ಯಾಪಾರಿಗಳಿಗೆ ಮಾರಣಾಂತಿಕ ಹಲ್ಲೆ: ಆಸ್ಪತ್ರೆಗೆ ರಾಜಕೀಯ ಮತ್ತು ಸಾಮಾಜಿಕ ಮುಖಂಡರ ನಿಯೋಗ ಭೇಟಿ

ಪುತ್ತೂರು: ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಲ್ಪಡಿ ಬಳಿ ಜವಳಿ ವ್ಯಾಪಾರ ನಡೆಸುತ್ತಿದ್ದ ಇಬ್ಬರು ಯುವಕರ ಮೇಲೆ ಭಜರಂಗ ದಳದ ಗುಂಪು ವ್ಯಾಪಾರಕ್ಕೆ ತಡೆಯೊಡ್ಡಿ ಎರಡು ತಾಸುಗಳ ಕಾಲ ಮರಣಾಂತಿಕ ಹಲ್ಲೆ ನಡೆಸಿದೆ. ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಾಪಾರಿಗಳನ್ನು ಹಲವು ರಾಜಕೀಯ ಮತ್ತು ಸಾಮಾಜಿಕ ಮುಖಂಡರ ನಿಯೋಗವೊಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ.

ಮತಿ ತಪ್ಪುವ ಸ್ಥಿತಿವರೆಗೆ ವ್ಯಾಪಾರಿಗಳಿಗೆ ಥಳಿಸಿ, ದ್ವಿಚಕ್ರ ವಾಹನ ವನ್ನು ವ್ಯಾಪಾರಿಗಳ ಮೇಲೆ ಹರಿಸಿ ಕೊಲೆ ಯತ್ನ ನಡೆಸಿದ್ದಲ್ಲದೆ, ಅವರ ಕಾರನ್ನೂ ಹಾನಿಗೊಳಿಸಲಾಗಿದೆ. ಈ ಅಮಾನವೀಯ ಘಟನೆಯನ್ನು ನಿಯೋಗವು ತೀವ್ರವಾಗಿ ಖಂಡಿಸಿದೆ.

ಕಳೆದ ಹಲವಾರು ವರ್ಷಗಳಿಂದ ಜವಳಿ ವ್ಯಾಪಾರ ನಡೆಸುತ್ತಿದ್ದ ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ, ಆದರೆ ಯುವಕರು ಮುಸ್ಲಿಮರು ಎಂಬ ಒಂದೇ  ಕಾರಣಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾರೆ, ಆದ್ದರಿಂದ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ  ವಿರುದ್ದ  ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ಆಸ್ಪತ್ರೆ ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ಮೇಯರ್ ಕೆ ಅಶ್ರಫ್, ಮಾಜಿ ಶಾಸಕ ಮೊಯಿದಿನ್ ಬಾವ, ಸೋಶಿಯಲ್ ಫಾರೂಕ್, ಸಿಎಂ ಮುಸ್ತಫಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ UP ಇಬ್ರಾಹಿಂ, ಇಕ್ಬಾಲ್ ಮಂಗಳೂರು, ದ.ಕ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾ ನ್ , ಸ್ವಾಲಿಹ್ ಬಜ್ಪೆ, ಶರೀಫ್ ದೇರಳಕಟ್ಟೆ, ಹಿದಾಯತ್ ಮಾರಿಪಳ್ಳ, ಇಸ್ಮಾಯಿಲ್ ಇಂಜಿನಿಯರ್ ಕೊಳಂಬೆ, ಹಫೀಜ್ ಕೊಳಂಬೆ, ನಾಸಿರ್, ಬಜ್ಪೆ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸವಾದ್ ಅಡ್ಡೂರು ಮತ್ತಿತರರು ಹಾಜರಿದ್ದರು.

ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು, ಕೃತ್ಯದ ವಿರುದ್ಧ ನಾಗರಿಕ ಸಮಾಜ ಒಗ್ಗಟ್ಟಾಗಿ ಪ್ರತಿಭಟಿಸಲಿದೆ. ದುಷ್ಕರ್ಮಿ ಗಳಿಗೆ ಪೊಲೀಸ್ ಇಲಾಖೆ, ಕಾನೂನಿನ ಯಾವುದೇ ಭಯ ಇಲ್ಲದಾಗಿದೆ, ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ನೋಡಿ ಕೊಳ್ಳ ಬೇಕಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version