Home ಟಾಪ್ ಸುದ್ದಿಗಳು ಕನ್ಹಯ್ಯ ಕುಮಾರ್ ಹೇಳಿಕೆ | ಇವರ ತಾತ-ಮುತ್ತಾತ ಹೀಗೆ ಹೇಳಿ ಮಣ್ಣಾಗಿ ಹೋಗಿದ್ದಾರೆ: ಸಿ.ಟಿ.ರವಿ

ಕನ್ಹಯ್ಯ ಕುಮಾರ್ ಹೇಳಿಕೆ | ಇವರ ತಾತ-ಮುತ್ತಾತ ಹೀಗೆ ಹೇಳಿ ಮಣ್ಣಾಗಿ ಹೋಗಿದ್ದಾರೆ: ಸಿ.ಟಿ.ರವಿ

ಚಿಕ್ಕಮಗಳೂರು: ಬಿಜೆಪಿ ವಿರುದ್ಧ ಕನ್ಹಯ್ಯ ಕುಮಾರ್ ನೀಡಿರುವ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಇವರ ತಾತ-ಮುತ್ತಾತರು ಈ ರೀತಿ ಹೇಳಿ ಕಳೆದು ಹೋಗಿದ್ದಾರೆ. ಅವರ ಸಮಾಧಿ ಮಣ್ಣಿನ ಮೇಲೆ ಸಂಘ, ಬಿಜೆಪಿ ಬಲವಾಗಿದೆ. ಕನ್ನಯ್ಯ ಕುಮಾರ್ ತುಕ್ಡೆ ಗ್ಯಾಂಗಿನ ನಾಯಕ ಎಂದಿದ್ದಾರೆ.


ಹಿಟ್ಟು ಹಳಸಿತ್ತು ಡ್ಯಾಶ್ ಕಾದಿತ್ತು ಅನ್ನೋ ಗಾದೆ ಮಾತಿದೆ. ಈಗ ಅದೇ ಪರಿಸ್ಥಿತಿ ಕಾಂಗ್ರೆಸ್ ನದ್ದಾಗಿದೆ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷ ದೇಶಕ್ಕೇನು ಪ್ರಜಾಪ್ರಭುತ್ವದ ಪಾಠ ಹೇಳುತ್ತದೆ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಲ್ಲಿದೆ? ಅಲ್ಲಿರೋದು ವಂಶ ಪಾರಂಪರ್ಯ, ಪರಿವಾರ ಎಂದು ಹೇಳಿದ್ದಾರೆ.


ತುಕ್ಡೆ ಗ್ಯಾಂಗಿನ ನಾಯಕರಿಗೆ ಗತಿ ಇರಲಿಲ್ಲ, ಚುನಾವಣೆಯಲ್ಲಿ ಸೋತರೂ ಇಂತವರು ಬಹಳ ಮಾತನಾಡಿ ಮಾತನಾಡಿ ಮಣ್ಣಾಗಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿದ್ದಾರೆ.

Join Whatsapp
Exit mobile version