ಕನ್ಹಯ್ಯ ಕುಮಾರ್ ಪಾದಯಾತ್ರೆ: ರಾಹುಲ್ ಗಾಂಧಿ ಭಾಗಿ

- Advertisement -

ಪಟ್ನಾ: ಎನ್ಎಸ್‌ಯುಐ ಉಸ್ತುವಾರಿ ಕನ್ಹಯ್ಯ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಪಾಲ್ಗೊಂಡರು.

- Advertisement -

ಬಿಹಾರದ ಬೆಗೂಸರಾಯದಲ್ಲಿ ನಡೆಯುತ್ತಿರುವ ನಿರುದ್ಯೋಗ ಮತ್ತು ವಲಸೆ ಸಮಸ್ಯೆಗಳ ಕುರಿತು ಹಮ್ಮಿಕೊಳ್ಳಲಾದ (ಪಲಾಯನ ನಿಲ್ಲಿಸಿ, ಕೆಲಸ ಕೊಡಿ) ಪಾದಯಾತ್ರೆಯಲ್ಲಿ ಬಿಳಿ ಟಿ-ಶರ್ಟ್ ಧರಿಸಿ ರಾಹುಲ್ ಭಾಗಿಯಾದರು.

ಈ ವರ್ಷ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ನೀಡಲಾಗಿದೆ ಎನ್ನಲಾಗಿದೆ.

- Advertisement -

ಇಂದು ಬೆಳಿಗ್ಗೆ ಪಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್‌ ಅವರನ್ನು ಪಕ್ಷದ ನಾಯಕರು ಬರಮಾಡಿಕೊಂಡರು.

ಇಂದು ಪಟ್ನಾದಲ್ಲಿ ‘ಸಂವಿಧಾನ ಸುರಕ್ಷಾ ಸಮ್ಮೇಳನ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಹುಲ್ ಮಾತನಾಡಲಿದ್ದಾರೆ.

- Advertisement -


Must Read

Related Articles