ಕಲಬುರಗಿ: ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ, ದರ್ಗಾಕ್ಕೆ ಹೊರಟಿದ್ದ ಐವರ ಸಾವು

- Advertisement -

- Advertisement -

ಕಲಬುರಗಿ: ನಿಂತಿದ್ದ ಲಾರಿಗೆ ಮಿನಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಕ್ರಾಸ್ ಬಳಿ ನಡೆದಿದೆ.

ಇಂದು ನಸುಕಿನಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಜೀದ್, ಮೆಹಬೂಬಿ, ಪ್ರಿಯಾಂಕಾ, ಮೆಹಬೂಬ್ ಸೇರಿ ಐವರು ಮೃತಪಟ್ಟಿದ್ದಾರೆ. ಮೃತಪಟ್ಟವರು ಬಾಗಲಕೋಟೆಯ ನವನಗರ ನಿವಾಸಿಗಳು. ಸ್ಥಳಕ್ಕೆ ನೆಲೋಗಿ ಠಾಣೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ.

- Advertisement -

ಕಲಬುರಗಿಯ ಖಾಜಾ ಬಂದೇನವಾಜ್​ ದರ್ಗಾಕ್ಕೆ ತೆರಳುವಾಗ ದುರಂತ ಸಂಭವಿಸಿದ್ದು, ಮಿನಿ ಬಸ್​​ನಲ್ಲಿದ್ದ ಒಟ್ಟು 31 ಜನರ ಪೈಕಿ ಐವರು ಸಾವನ್ನಪ್ಪಿದ್ದಾರೆ. 11 ಜನರಿಗೆ ಗಾಯಗಳಾಗಿವೆ. ಸದ್ಯ ಗಾಯಾಳುಗಳನ್ನು ಕಲಬುರಗಿಯ ಜಿಮ್ಸ್​​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೇವರ್ಗಿಯಲ್ಲಿ ಶಾಸಕ ಡಾ.ಅಜಯ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನಿಂತಿದ್ದ ಲಾರಿಗೆ ಗುದ್ದಿ ಐವರು ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಬಹಳ ಗಂಭೀರವಾಗಿದೆ. ಅವರನ್ನ ಕಲಬುರಗಿ ಖಾಸಗಿ ಆಸ್ಪತ್ರೆಗೆ ಸಳಾಂತರಿಸಲಾಗಿದೆ. ಬಹಳ ದೊಡ್ಡ ಅನಾಹುತ ನಡೆದಿದೆ. ರಸ್ತೆ ಬದಿ ನಿಂತಿದ್ದ ಲಾರಿಗೆ ಮಿನಿ ಬಸ್ ಡಿಕ್ಕಿ ಹೊಡೆದಿದೆ. ಸರ್ಕಾರದ ಜೊತೆ ತಕ್ಷಣವೇ ಮಾತನಾಡಿ ಗಾಯಳುಗಳ ಚಿಕಿತ್ಸಾ ವೆಚ್ಚ ಭರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಓರ್ವ ಗಾಯಾಳು ಮಾತನಾಡಿದ್ದು, ರಾತ್ರಿ 11 ಗಂಟೆಗೆ ನಾವು ಬಾಗಲಕೋಟೆಯಿಂದ ಹೊರಟ್ಟಿದ್ದೆವು. ಎಲ್ಲರೂ ಒಂದೇ ಫ್ಯಾಮಿಲಿಯವರಾಗಿದ್ದು, ಅದರಲ್ಲಿ ಮೂವರು ನಮ್ಮ ಸ್ನೇಹಿತರಿದ್ದರು. ಒಟ್ಟು 31 ಜನ ದರ್ಗಾ ದರ್ಶನಕ್ಕೆ ಬಂದಿದ್ದೆವು‌. ನಮ್ಮ ಮಿನಿ ಬಸ್ ಟೈರ್ ಪಂಚರ್ ಆಗಿದೆ. ಡ್ರೈವರ್​​ಗೆ ಕಂಟ್ರೋಲ್​ಗೆ ಬಾರದ ಹಿನ್ನಲೆ. ನಿಂತಿದ್ದ ಲಾರಿಗೆ‌ ಡಿಕ್ಕಿ ಹೊಡೆದಿದೆ. ನಸುಕಿನ ಜಾವ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

- Advertisement -


Must Read

Related Articles