Home ಟಾಪ್ ಸುದ್ದಿಗಳು ವಿಜಯನಗರ ಜಿಲ್ಲೆಯ ಮೊದಲ ಸಿಇಒ ಆಗಿ ಕೆ.ಎಂ.ಗಾಯತ್ರಿ ನೇಮಕ

ವಿಜಯನಗರ ಜಿಲ್ಲೆಯ ಮೊದಲ ಸಿಇಒ ಆಗಿ ಕೆ.ಎಂ.ಗಾಯತ್ರಿ ನೇಮಕ

ಬೆಂಗಳೂರು: ಐಎಎಸ್ ಅಧಿಕಾರಿ ಕೆ.ಎಂ.ಗಾಯತ್ರಿಯವರನ್ನು ವಿಜಯನಗರ ಜಿಲ್ಲೆಯ ಮೊದಲ ಸಿಇಒ ಆಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  

ಈಗಾಗಲೇ ನೂತನ ಜಿಲ್ಲೆ ವಿಜಯನಗರಕ್ಕೆ ಜಿಲ್ಲಾಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಈ ಬಳಿಕ ವಿಜಯನಗರ ಜಿಲ್ಲೆಯ ಮೊದಲ ಸಿಇಒ ಆಗಿ ಐಎಎಸ್ ಅಧಿಕಾರಿ ಕೆ.ಎಂ.ಗಾಯತ್ರಿಯವರನ್ನು ನೇಮಕ ಮಾಡಲಾಗಿದೆ.

ಈ ಕುರಿತಂತೆ ರಾಜ್ಯ ಸರ್ಕಾರ ಆಧಿಸೂಚನೆ ಹೊರಡಿಸಿದ್ದು, ಮೈಸೂರಿನ ಅಬ್ದುಲ್ ನಝೀರ್ ಸಾಬ್ ಇನ್ಟಿಟ್ಯೂಟ್ ನ ನಿರ್ದೇಶಕರಾಗಿದ್ದ ಐಎಎಸ್ ಅಧಿಕಾರಿ ಕೆ.ಎಂ.ಗಾಯತ್ರಿ ಅವರನ್ನು ವಿಜಯನಗರ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯನ್ನಾಗಿ ನೇಮಕ ಮಾಡಿ ಆದೇಶಿಸಿದೆ.

Join Whatsapp
Exit mobile version