Home ಟಾಪ್ ಸುದ್ದಿಗಳು ಹಿಂದುತ್ವವಾದಿಗಳಿಂದ ಮುಸ್ಲಿಮ್ ಯುವಕನ ಭೀಕರ ಹತ್ಯೆ: 10 ಮಂದಿಯ ಬಂಧನ

ಹಿಂದುತ್ವವಾದಿಗಳಿಂದ ಮುಸ್ಲಿಮ್ ಯುವಕನ ಭೀಕರ ಹತ್ಯೆ: 10 ಮಂದಿಯ ಬಂಧನ

ಪಾಟ್ನಾ: ಬಿಹಾರದ ನಾವಡಾ ಜಿಲ್ಲೆಯ ಗಂಗ್ವಿ ಗ್ರಾಮದಲ್ಲಿ ಹಿಂದುತ್ವ ಗುಂಪೊಂದು ಮುಸ್ಲಿಮ್ ಯುವಕನನ್ನು ಗಂಭೀರವಾಗಿ ಥಳಿಸಿ ಹತ್ಯೆ ನಡೆಸಿದೆ.

ಟ್ರ್ಯಾಕ್ಟರ್ ನಿಂದ ಬ್ಯಾಟರಿಯನ್ನು ಕದ್ದ ಆರೋಪದಲ್ಲಿ ಮುಹಮ್ಮದ್ ಅಂಜಾನ್ ಇಮ್ರಾನ್ ಎಂಬಾತನ ಮೇಲೆ ಗುಂಪು ಗಂಭೀರ ಹಲ್ಲೆ ನಡೆಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿಂದುತ್ವ ಗುಂಪಿನ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸಂತ್ರಸ್ತನ ತಂದೆ ಜಮಿಲ್ ಅಖ್ತರ್ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಹತ್ತು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಪ್ರಸಾದ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಮೃತ ಇಮ್ರಾನ್ ನ ತಂದೆ ದುಷ್ಕರ್ಮಿಗಳಾದ ಸುರೇಶ್, ಪ್ರದೀಪ್ ಕುಮಾರ್, ಸಂದೀಪ್ ಕುಮಾರ್ ಸೇರಿದಂತೆ ಹಲವರ ವಿರುದ್ಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Join Whatsapp
Exit mobile version