ಅಹಮದಾಬಾದ್ : ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರತ್ತ 2012ರಲ್ಲಿ ಚಪ್ಪಲಿ ಎಸೆದಿದ್ದ ಚಹಾ ಮಾರಾಟಗಾರನೊಬ್ಬನಿಗೆ 18 ತಿಂಗಳು ಜೈಲು ಶಿಕ್ಷೆ ಘೋಷಿಸಲಾಗಿದೆ. ಮಿರ್ಜಾಪುರ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಶಿಕ್ಷೆ ವಿಧಿಸಿದೆ.
ರಾಜ್ ಕೋಟ್ ಜಿಲ್ಲೆಯ ಚಹಾ ವ್ಯಾಪಾರಿ ಭವಾನಿ ದಾಸ್ ಬಾವಾಜಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ ಕೋರ್ಟ್ ಶಿಕ್ಷೆ ವಿಧಿಸಿದೆ. ಸರಕಾರಿ ನೌಕರನ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ ಆರೋಪ ಭವಾನಿದಾಸ್ ವಿರುದ್ಧ ದಾಖಲಾಗಿತ್ತು.
ತಮ್ಮ ದೀರ್ಘಾವಧಿಯಿಂದ ಇತ್ಯರ್ಥವಾಗದ ಪ್ರಕರಣದ ಬಗ್ಗೆ ಹತಾಶೆಗೊಂಡು ನ್ಯಾಯಾಧೀಶರತ್ತ ಚಪ್ಪಲಿ ಎಸೆದಿದ್ದೆ ಎಂದು ಪೊಲೀಸರಿಗೆ ನೀಡಲಾಗಿದ್ದ ಹೇಳಿಕೆಯಲ್ಲಿ ದಾಸ್ ತಿಳಿಸಿದ್ದ. ದಾಸ್ ಗೆ 18 ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಆತನ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಯಾವುದೇ ದಂಡವನ್ನು ನ್ಯಾಯಾಧೀಶರು ವಿಧಿಸಲಿಲ್ಲ.