Home ಟಾಪ್ ಸುದ್ದಿಗಳು ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನಾ ವರದಿಗೆ ಜೆಪಿಸಿ ಗ್ರೀನ್ ಸಿಗ್ನಲ್

ವಕ್ಫ್ ತಿದ್ದುಪಡಿ ಮಸೂದೆಯ ಪರಿಶೀಲನಾ ವರದಿಗೆ ಜೆಪಿಸಿ ಗ್ರೀನ್ ಸಿಗ್ನಲ್

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿ ಸಲ್ಲಿಸಲು ಬಿಜೆಪಿ ಹಿರಿಯ ಸಂಸದ ಜಗದಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಅನುಮೋದನೆ ನೀಡಿದೆ.
ತಿದ್ದುಪಡಿ ಮಸೂದೆಗೆ ಪ್ರಮುಖ 14 ಬದಲಾವಣೆ ಮಾಡಲು ಒಪ್ಪಿಗೆ ಸೂಚಿಸಿ ಸಮಿತಿ ಸೋಮವಾರ ಅನುಮೋದನೆ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಒಟ್ಟು 66 ಬದಲಾವಣೆಗಳನ್ನು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ವಿರೋಧ ಪಕ್ಷಗಳಿಂದ ಬಂದಿದ್ದ ಸದಸ್ಯರು ಬದಲಾವಣೆ ಮಾಡದಂತೆ ಪಟ್ಟು ಹಿಡಿದಿದ್ದರು. ಬಹುತೇಕ ಬಿಜೆಪಿ ಸಂಸದರು ಸೂಚಿಸಿರುವ ಬದಲಾವಣೆಗಳನ್ನು ಸಮಿತಿ ಎತ್ತಿ ಹಿಡಿದಿದೆ. ವಿರೋಧ ಪಕ್ಷಗಳ ಸಂಸದರು ಸೂಚಿಸಿದ್ದ ಬದಲಾವಣೆಗಳಿಗೆ ಮನ್ನಣೆ ನೀಡಲಾಗಿಲ್ಲ ಎನ್ನಲಾಗಿದೆ.

ಅದಾಗ್ಯೂ ಪ್ರಸ್ತಾವಿತ 14 ಬದಲಾವಣೆಗಳನ್ನು ಅಂಗೀಕರಿಸಲು ಇದೇ ಜನವರಿ 29 ರಂದು ಮತದಾನ ನಡೆಯಲಿದೆ. ಜ.31 ರಂದು ಅಂತಿಮ ವರದಿ ಸಲ್ಲಿಸುವುದಾಗಿ ಜಗದಂಬಿಕಾ ಪಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಸತ್‌ನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಂಡಿಸಿತ್ತು. ಇದಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದವು.ಹೀಗಾಗಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಲು ಪಾಲ್ ನೇತೃತ್ವದ ಜೆಪಿಸಿಯನ್ನು ರಚಿಸಲಾಗಿತ್ತು. ಇದರಲ್ಲಿ ಬಿಜೆಪಿಯ 23 ಹಾಗೂ ಬೇರೆ ಬೇರೆ ಪಕ್ಷಗಳ 44 ಸದಸ್ಯರಿದ್ದರು.

Join Whatsapp
Exit mobile version