ಅಮೃತಸರ: ಪಂಚರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಪ್ರಚಂಡ ಬಹುಮತದಿಂದ ವಿಜೇತವಾದ ಆಮ್ ಆದ್ಮಿ ಪಕ್ಷದ ಮುಖಂಡ ಭಗವಂತ್ ಮಾನ್ನ್ ಅವರು ಪಂಜಾಬ್’ನ ಮುಂದಿನ ಮುಖ್ಯಮಂತ್ರಿ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಖ್ಯಾತ ಕಾಮಿಡಿಯನ್ ಆಗಿರುವ ಭಗವಂತ್ ಮಾನ್ನ್ ಅವರ ಪಯಣ ಮುಖ್ಯಮಂತ್ರಿ ವರೆಗೆ ಸಾಗಿರುವುದು ವಿಶೇಷ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು ಪಕ್ಷ ಅಧಿಕಾರವನ್ನು ಪಡೆಯಲು ನಡೆಸಿದ ಪರಿಶ್ರಮ ನಿಜಕ್ಕೂ ಪಂಜಾಬ್ ಅನ್ನು ಮರಳಿ ಪಡೆಯುವ ಯುದ್ಧ ಎಂದೇ ಬಣ್ಣಿಸಿದ್ದಾರೆ.
11 ವರ್ಷಗಳ ಅವಧಿಯಲ್ಲಿ ಆಮ್ ಅದ್ಮಿಯನ್ನು ಅಧಿಕಾರಕ್ಕೇರಿಸುವಲ್ಲಿ 48 ಪ್ರಾಯದ ಭಗವಂತ ಮಾನ್ನ ಎಂಬ ಕಾಮೇಡಿಯನ್’ ನ ಪಾತ್ರ ಮಹತ್ತರವಾಗಿದೆ.
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಪ್ರಚಂಡ ಬಹುಮತಗಳಿಂದ ವಿಜಯಿಯಾಗಿರುವುದರಿಂದ ಭಗವಂತ್ ಮಾನ್ನ್ ಅವರ ಸ್ವ- ಕ್ಷೇತ್ರವಾದ ಧುರಿಯಲ್ಲಿ ಮುನ್ನಡೆ ಸಾಧಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರ ನಂತರ ಆಮ್ ಆದ್ಮಿ ಪಕ್ಷದ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಜನವರಿ 19 ರಂದು ಪಕ್ಷದ ಆಂತರಿಕ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಈ ಚುನಾವಣೆಯಲ್ಲಿ ಮಾನ್ನ್ ಅವರು ಶೇಕಡಾ 93 ರಷ್ಟು ಮತವನ್ನು ಪಡೆದಿದ್ದಾರೆ.
48 ವರ್ಷದ ಭಗವಂತ್ ಮಾನ್ ಅವರು ಅಕ್ಟೋಬರ್ 17, 1973 ರಂದು ಸಂಗ್ರೂರಿನ ಸರ್ತೋಜ್ ಗ್ರಾಮದಲ್ಲಿ ಜನಿಸಿದರು. ಹಾಸ್ಯನಟ-ನಟ ಕಮ್ ರಾಜಕಾರಣಿಯಾಗಿ ಪರಿವರ್ತನೆಗೊಂಡ ಮಾನ್ ಅವರು ಜಾಟ್ ಸಿಖ್ ಸಮುದಾಯಕ್ಕೆ ಸೇರಿದವರು.
ಪಂಜಾಬ್‌ನ ಸಂಗ್ರೂರ್ ಕ್ಷೇತ್ರದ ಲೋಕಸಭಾ ಸಂಸದರಾಗಿರುವ ಭಗವಂತ್ ಮಾನ್ 2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ರಾಜಕೀಯ ಪ್ರವೇಶಿಸಿದರು. ಅವರು ಮೊದಲು 2012 ರಲ್ಲಿ ಪಂಜಾಬ್ ನ ಲೆಹ್ರಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಆದರೆ ಅವರು ಗೆದ್ದಿರಲಿಲ್ಲ.
2014 ರಲ್ಲಿ ಆಮ್ ಆದ್ಮಿಕ್ಕೆ ಸೇರ್ಪಡೆಯಾದ ಭಗವಂತ್ 2014 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾದರು. ಅವರು 2019 ರಲ್ಲಿ ಮತ್ತೆ ಅದೇ ಸ್ಥಾನದಿಂದ ಗೆದ್ದು ತಮ್ಮ ಯಶಸ್ಸನ್ನು ಪುನರಾವರ್ತಿಸಿದರು ಮತ್ತು ಪ್ರಸ್ತುತ ಪಂಜಾಬ್‌ನ ಏಕೈಕ ಎಎಪಿ ಸಂಸದರಾಗಿದ್ದಾರೆ.
ಆ ವೇಳೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕೇವಲ್ ಧಿಲ್ಲೋನ್ ಅವರನ್ನು 1,10,211 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ಸಂಸದರಾಗಿ ಸ್ಥಾನ ಪಡೆದರು.
ಇನ್ನು 2019 ರಲ್ಲಿ ಪಂಜಾಬ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಪಂಜಾಬ್‌ನ ಮುಂದಿನ ಸಿಎಂ ಎಂದೇ ಬಿಂಬಿತರಾಗಿರುವ ಭಗವಂತ್ ಮಾನ್ ಅವರು ದೂರದರ್ಶನ ಕಾರ್ಯಕ್ರಮ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡಿದ್ದರು.
ಭಗವಂತ್ ಮಾನ್ ಅವರು ವಿಶೇಷ ಅಗತ್ಯವುಳ್ಳ ಮಕ್ಕಳ ಮೇಲೆ ಕೇಂದ್ರೀಕರಿಸುವ ತಮ್ಮದೇ ಆದ ಚಾರಿಟಬಲ್ ಫೌಂಡೇಶನ್ ಆದ ಲೋಕ್ ಲೆಹರ್ ಫೌಂಡೇಶನ್ ಅನ್ನು ಹೊಂದಿದ್ದಾರೆ. ಇನ್ನು, ಇರಾಕ್‌ನಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ಸಹ ಭಗವಂತ್ ಮಾನ್ ಸಹಾಯ ಮಾಡಿದ್ದರು.