Home ಟಾಪ್ ಸುದ್ದಿಗಳು ತನಿಖಾ ಏಜೆನ್ಸಿಗಳೆದುರು ಪತ್ರಕರ್ತರು ಸುದ್ದಿ ಮೂಲ ತಿಳಿಸಬೇಕಾಗುತ್ತದೆ: ದೆಹಲಿ ಕೋರ್ಟ್

ತನಿಖಾ ಏಜೆನ್ಸಿಗಳೆದುರು ಪತ್ರಕರ್ತರು ಸುದ್ದಿ ಮೂಲ ತಿಳಿಸಬೇಕಾಗುತ್ತದೆ: ದೆಹಲಿ ಕೋರ್ಟ್

ನವದೆಹಲಿ: ಪತ್ರಕರ್ತರು ತಮ್ಮ ಸುದ್ದಿ ಮೂಲವನ್ನು ತನಿಖಾ ಏಜೆನ್ಸಿಗಳಿಗೆ ನೀಡುವುದರಿಂದ ಮುಕ್ತರಲ್ಲ. ಅದರಲ್ಲೂ ಕ್ರಿಮಿನಲ್ ಪ್ರಕರಣಗಳಲ್ಲಿ ಅದು ತನಿಖೆಗೆ ಅಗತ್ಯವಾಗಿರುವಾಗ ಕೊಡಬೇಕಾಗುತ್ತದೆ ಎಂದು ದೆಹಲಿ ಕೋರ್ಟ್ ಹೇಳಿದೆ.


ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಕುಟುಂಬದ ಮೇಲೆ ಮಾಡಿರುವ ಆದಾಯಕ್ಕಿಂತ ಹೆಚ್ಚು ಆಸ್ತಿಯ ಆಪಾದನೆಗಳು ಟೀವಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದೂ, ಸಿಬಿಐ ಪ್ರಕರಣ ಮುಗಿಸಲು ಹೇಳಿದ ಅರ್ಜಿಯನ್ನು ನಿರಾಕರಿಸಿ ರೌಸ್ ಅವೆನ್ಯೂ ಕೋರ್ಟ್ಗಳ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಂಜನಿ ಮಹಾಜನ್ ಅವರು ಮೇಲಿನಂತೆ ಹೇಳಿದರು.
2007ರ ಮಾರ್ಚ್’ನಲ್ಲಿ ಸುಪ್ರೀಂ ಕೋರ್ಟ್ ಮುಲಾಯಂ ಸಿಂಗ್ ಮತ್ತು ಅವರ ಕುಟುಂಬ ಹೊಂದಿರುವ ಆಸ್ತಿಯ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು. 2009ರ ಫೆಬ್ರವರಿ 9ರಂದು ವಿಚಾರಣೆಗೆ ಇದ್ದ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಲೇಖನ ಪ್ರಕಟವಾಯಿತು. ‘ಮುಲಾಯಂರನ್ನು ದೋಷಾರೋಪ ಮಾಡಲಾಗಿದೆ ಎಂದು ಸಿಬಿಐ ಹೇಳಬಹುದು- ತನಿಖಾ ಏಜೆನ್ಸಿಯು ಪಿಐಎಲ್ ಮೇಲೆ ಸರಿಯಾಗಿ ಗಮನ ಹರಿಸಿಲ್ಲ ಎನ್ನುತ್ತದೆ ಡಿಐಜಿ ಟಿಪ್ಪಣಿ” ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಈ ಸುದ್ದಿಯು ಆಗ ಸ್ಟಾರ್ ನ್ಯೂಸ್, ಸಿಎನ್ ಎನ್- ಐಬಿಎನ್ ಮೊದಲಾದ ಚಾನೆಲ್ ಗಳಲ್ಲೂ ಪ್ರಸಾರವಾಯಿತು.


ತನ್ನ ವರ್ಚಸ್ಸನ್ನು ಹಾಳು ಮಾಡಲು ಯಾರೋ ಸುಳ್ಳು ಸುದ್ದಿಗಳನ್ನು ಹುಟ್ಟಿಸುತ್ತಿದ್ದಾರೆ ಎಂದು ಸಿಬಿಐ ದೂರು ನೀಡಿತು. ಅಂತಹ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವನ್ನು ಸಾಚಾ ಎಂಬಂತೆ ಪ್ರತಿಬಿಂಬಿಸುತ್ತಾ ಹೆಣೆದ ಸುದ್ದಿಗಳನ್ನು ಹೊರಗಿಡುತ್ತಿದ್ದಾರೆ ಎಂದು ಸಿಬಿಐ ಆಪಾದಿಸಿತು. ಯಾರು ಈ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ತಿಳಿದು ಬಂದಿಲ್ಲ; ಏಕೆಂದರೆ ಮಾಧ್ಯಮಗಳವರು ತಮ್ಮ ಸುದ್ದಿ ಮೂಲವನ್ನು ತಿಳಿಸುತ್ತಿಲ್ಲ ಎಂದು ಪ್ರಕರಣ ಮುಕ್ತಾಯದ ಅರ್ಜಿಯಲ್ಲಿ ಸಿಬಿಐ ಹೇಳಿತ್ತು. ಯಾವುದೇ ಕ್ರಿಮಿನಲ್ ಸಂಚು ಇದರ ಹಿಂದೆ ಇದೆ ಎಂದು ನಿರೂಪಿಸಲು ಸಾಕ್ಷ್ಯಗಳಿಲ್ಲ ಎಂದೂ ಅದರಲ್ಲಿ ಹೇಳಲಾಗಿತ್ತು.


ಸುಪ್ರೀಂ ಕೋರ್ಟಿನಲ್ಲಿ ಹಿಂದೆ ಅರ್ಜಿ ಸಲ್ಲಿಸಿದ್ದ ವಿಶ್ವನಾಥ ಚತುರ್ವೇದಿಯವರು ಸಿಬಿಐ ಮುಕ್ತಾಯದ ಅರ್ಜಿ ವಿರುದ್ಧ ಆಕ್ಷೇಪದ ಮತ್ತೊಂದು ಅರ್ಜಿಯೊಂದನ್ನು ಸಲ್ಲಿಸಿದರು. ಸಿಬಿಐನ ಈ ಅರ್ಜಿ ಒಪ್ಪಿದರೆ ಅಪರಾಧಿಗಳು ಆರಾಮವಾಗಿ ಪಾರಾಗುತ್ತಾರೆ ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ ಚತುರ್ವೇದಿ ಸಂಬಂಧ ಪಡದ ಹೊರಗಿನವರಾಗಿದ್ದು, ಅವರಿಗೆ ಇದನ್ನು ಸಲ್ಲಿಸಲವಕಾಶವಿಲ್ಲ ಎಂದು ಕೋರ್ಟ್ ಆ ಅರ್ಜಿಯನ್ನು ವಜಾ ಮಾಡಿತು. ಆದರೆ ಸಿಬಿಐ ತನ್ನ ತನಿಖಾ ಸೂಕ್ಷ್ಮ ಅಂತ್ಯಕ್ಕೆ ಬಂದಿಲ್ಲ ಎಂಬುದನ್ನೂ ಕೋರ್ಟ್ ಹೇಳಿತು.
ಪತ್ರಕರ್ತರು, ಮಾಧ್ಯಮಗಳವರು ಸುದ್ದಿ ಮೂಲ ಹೇಳಲು ತಿರಸ್ಕರಿಸಿದ ಮಾತ್ರಕ್ಕೆ ಸಿಬಿಐ ತನಿಖೆಯನ್ನು ಅಲ್ಲಿಗೇ ಕೈಬಿಡಬೇಕಾಗಿರಲಿಲ್ಲ. ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡುವುದರಿಂದ ಪತ್ರಕರ್ತರನ್ನೇನೂ ಹೊರಗಿಡುವ ಕಾನೂನು ಭಾರತದಲ್ಲಿ ಇಲ್ಲ. ಅದರಲ್ಲೂ ಕ್ರಿಮಿನಲ್ ಪ್ರಕರಣಗಳಲ್ಲಿ ಹಾಗೆ ಮಾಡುವಂತೆಯೇ ಇಲ್ಲ ಎಂದು ಕೋರ್ಟ್ ಹೇಳಿತು.


ತನಿಖೆ ಮುಂದುವರಿಸಲು ನಿಮ್ಮ ಸುದ್ದಿ ಮೂಲ ಸಹಾಯಕ, ಇಲ್ಲದಿದ್ದರೆ ಸಾಕ್ಷ್ಯ ಇಲ್ಲದಾಗುತ್ತದೆ ಎಂಬುದನ್ನು ಸಿಬಿಐನವರು ಪತ್ರಕರ್ತರಿಗೆ ಮನದಟ್ಟು ಮಾಡಬೇಕು. ಅಲ್ಲದೆ ಭಾರತೀಯ ದಂಡ ಸಂಹಿತೆಯ ಕ್ರಿಮಿನಲ್ ಪ್ರೊಸೀಜರ್ ಕೋಡ್ ಪ್ರಕಾರ ಸಿಬಿಐ ತನಿಖೆಗಳಿಗೆ ಪತ್ರಕರ್ತರ ಸಹಿತ ಎಲ್ಲ ಸಾರ್ವಜನಿಕರನ್ನು ಎಳೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದೂ ಕೋರ್ಟ್ ಹೇಳಿತು.
“ಸಂಬಂಧಿಸಿದ ಪತ್ರಕರ್ತರಿಗೆ, ಮಾಧ್ಯಮಗಳಿಗೆ ಸಿಬಿಐನವರು ಅಪರಾಧ ದಂಡ ಸಂಹಿತೆಯ 91ನೇ ವಿಧಿ ರೀತ್ಯಾ ಕಾನೂನುಬದ್ಧವಾಗಿ ಬೇಕಾದ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಬಹುದು.” ಎಂದೂ ಕೋರ್ಟು ಹೇಳಿತು. ಮುಕ್ತಾಯದ ಅರ್ಜಿಯ ಪ್ರಕಾರ ಪತ್ರಕರ್ತರಾದ ದೀಪಕ್ ಚೌರಾಸಿಯಾ, ಭೂಪಿಂದರ್ ಚೌಬೆ, ಮನೋಜ್ ಮಿತ್ತಾರನ್ನು ವಿಚಾರಿಸಲಾಯಿತು. ಆದರೆ ಮುಕ್ತಾಯದ ಅರ್ಜಿಯಲ್ಲಿ ಅಪರಾಧ ದಂಡ ಸಂಹಿತೆಯ 161ನೇ ವಿಧಿ ಪ್ರಕಾರ ಭೂಪಿಂದರ್ ಚೌಬೆಯವರ ಹೇಳಿಕೆ ಮಾತ್ರ ಇದೆ.
ಸಿಬಿಐ ಸಲ್ಲಿಸಿದ ಅರ್ಜಿಯಲ್ಲಿ ಸಾಕ್ಷ್ಯವಾಗಿ ಚೌಬೆಯವರ ಹೇಳಿಕೆ ಮಾತ್ರ ಇದೆ. “ಅಪರಾಧ ದಂಡ ಸಂಹಿತೆಯ 161ನೇ ವಿಧಿಯಡಿ ದೀಪಕ್ ಚೌರಾಸಿಯಾರ, ಮನೋಜ್ ಮಿತ್ತಾರ ಹೇಳಿಕೆ ಏಕೆ ದಾಖಲಿಸಿಲ್ಲ. ಅವರ ಹೆಸರು ಸಹ ಸಾಕ್ಷ್ಯಾಧಾರ ಪಟ್ಟಿಯಲ್ಲೂ ಇಲ್ಲ.” ಎಂದು ಕೋರ್ಟ್ ಹೇಳಿತು. ಈ ಬಗ್ಗೆ ಇನ್ನೂ ತನಿಖೆಯ ಅಗತ್ಯವಿದೆ. ಪತ್ರಕರ್ತರು ಯಾವ ಮೂಲದಿಂದ ನಕಲಿ ದಾಖಲೆಗಳ ಸುದ್ದಿಗಳನ್ನು ಪಡೆದರು ಎಂಬುದು ಗೊತ್ತಾಗಬೇಕು.


“”ಸುದ್ದಿ ಪ್ರಕಾರ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಮಾಧ್ಯಮಗಳಿಗೆ ಸುದ್ದಿ ನೀಡಿದವರು ಯಾರು ಎಂದು ಗೊತ್ತಾಗಬೇಕು. ಮಾಧ್ಯಮಕ್ಕೆ ಸುದ್ದಿ ಪಡೆಯುವುದು, ಪ್ರಕಟಿಸುವುದರ ಬಗ್ಗೆ ತನಿಖೆ ಆಗಬೇಕು. ಈ ಕಾರಣದಿಂದ ಈ ವಿಷಯದಲ್ಲಿ ಇನ್ನಷ್ಟು ತನಿಖೆಯ ಅಗತ್ಯವಿದೆ” ಎಂದು ಕೋರ್ಟ್ ಹೇಳಿತು.
ಅದೇ ವೇಳೆ ಸಿಬಿಐನ ಪ್ರಕರಣ ಮುಕ್ತಾಯದ ಅರ್ಜಿಯನ್ನು ನಿರಾಕರಿಸಿದ ಕೋರ್ಟ್, ಈ ವಿಷಯವಾಗಿ ಇನ್ನಷ್ಟು ತನಿಖೆ ನಡೆಸಿ ಎಂದು ಸಿಬಿಐಗೆ ಆದೇಶಿಸಿತು. ಸಿಬಿಐ ಮುಂದಿನ ತನಿಖೆಗೆ ಇಲ್ಲವೇ ಇನ್ಯಾವುದಾದರೂ ದಾರಿಯ ನಡೆಗೆ ಮುಕ್ತರಿದ್ದಾರೆ ಎಂದು ಸಹ ಕೋರ್ಟು ಹೇಳಿತು.

Join Whatsapp
Exit mobile version