ಬೆಂಗಳೂರು: ನಗರದ ಭಾರೀ ಟ್ರಾಫಿಕ್ ನಡುವೆ ಸಿಕ್ಕಿ ಹಾಕಿಕೊಂಡ ವಧುವೊಬ್ಬರು ನಿಗದಿತ ಸಮಯಕ್ಕೆ ಮದುವೆ ಮಂಟಪವನ್ನು ತಲುಪಲು ತನ್ನ ಕಾರನ್ನು ಬಿಟ್ಟು ಮೆಟ್ರೋವನ್ನು ಹತ್ತಿ ದಿಬ್ಬಣ ಹೋಗಿದ್ದಾರೆ.
ವಧು ಆಭರಣಗಳನ್ನು ಧರಿಸಿ ಮೆಟ್ರೊ ಸವಾರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಗರದ ಕಿರಿಕಿರಿಯ ಟ್ರಾಫಿಕ್ ದಟ್ಟಣೆಯು ವಧು ತನ್ನ ಸ್ವಂತ ಮದುವೆಗೆ ತಡವಾಗಿ ಬರಲು ಕಾರಣವಾಯಿತು, ಆದರೆ ಅವರು ನಗುವಿನೊಂದಿಗೆ ಮೆಟ್ರೋ ಸವಾರಿ ಮಾಡಿದ್ದು, ಮಧುಮಗಳು ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ಇಂಟರ್ನೆಟ್ ಬಳಕೆದಾರರು ಆಕೆಯನ್ನು ಪ್ರಶಂಸಿದ್ದಾರೆ.
ಅವಳನ್ನು “ಮಾಟ್ ಎ ಬ್ರೈಡ್” ಎಂದು ಕರೆದು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಟ್ವಿಟರ್ ಬಳಕೆದಾರರೊಬ್ಬರು, ವಾಟ್ ಸ್ಟಾರ್ ಎಂದಿದ್ದಾಳೆ. ವೀಡಿಯೊವು 8000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ ಮತ್ತು ವಧು ಮೆಟ್ರೋದ ಸ್ವಯಂಚಾಲಿತ ಪ್ರವೇಶ ಗೇಟ್ ಮೂಲಕ ಮತ್ತು ಮೆಟ್ರೋ ರೈಲಿನಲ್ಲಿ ಬರುವಾಗ ಕೈ ಬೀಸುತ್ತಿರುವುದನ್ನು ತೋರಿಸುತ್ತದೆ.
ನಂತರ ಅವಳು ಮದುವೆಯ ಸ್ಥಳಕ್ಕೆ ತಲುಪಿ ವೇದಿಕೆಯ ಮೇಲೆ ಕುಳಿತು ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. “ಅವಳು ಮಸ್ತ್ ವಧು, ನಮ್ ಕನ್ನಡ ಹುಡ್ಗಿ” ಎಂದು ಕೆಲವರು ಬರೆದುಕೊಂಡಿದ್ದಾರೆ.
ಮತ್ತೊಬ್ಬರು ಮೆಟ್ರೋಗೆ ಧನ್ಯವಾದ ಅರ್ಪಿಸಿ ಮೆಟ್ರೋ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ ಅದಕ್ಕೆ ಉತ್ತರವಾಗಿ “ಮದುವೆ ರದ್ದು” ಎಂದು ಮತ್ತೊಬ್ಬರು ಬರೆದಿದ್ದಾರೆ.