Home ಟಾಪ್ ಸುದ್ದಿಗಳು ಐಎಎಸ್ ಅಧಿಕಾರಿಯ ಅನೈತಿಕ ಸಂಬಂಧದ ದಾಖಲೆ ನಾಶಮಾಡಲು ಪತ್ರಕರ್ತನ ಕೊಲೆ: ಹೈಕೋರ್ಟ್ ಗೆ ಮಾಹಿತಿ ನೀಡಿದ...

ಐಎಎಸ್ ಅಧಿಕಾರಿಯ ಅನೈತಿಕ ಸಂಬಂಧದ ದಾಖಲೆ ನಾಶಮಾಡಲು ಪತ್ರಕರ್ತನ ಕೊಲೆ: ಹೈಕೋರ್ಟ್ ಗೆ ಮಾಹಿತಿ ನೀಡಿದ ಕುಟುಂಬ

ಕೇರಳ: ಕಾರು ಢಿಕ್ಕಿ ಹೊಡೆದು ಪತ್ರಕರ್ತನ ಸಾವಿಗೆ ಕಾರಣನಾದ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ವಿರುದ್ಧ ರಾಜ್ಯ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿಕರವಲ್ಲ. ಪ್ರಾಸಿಕ್ಯೂಶನ್ ಆರೋಪಿಯ ಪರವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ತನಿಖೆಗೆ ವಹಿಸಬೇಕೆಂದು ಮೃತ ಪತ್ರಕರ್ತ ಕೆಎಂ ಬಶೀರ್ ಕುಟುಂಬ ಹೈಕೋರ್ಟ್‌ಗೆ ವಿನಂತಿಸಿದೆ.

ಸಿರಾಜ್ ದೈನಿಕದ ತಿರುವನಂತಪುರಂ ಬ್ಯುರೋ ಚೀಫ್ ಕೆಎಂ ಬಶೀರ್‌ರ ಸಹೋದರ ಅಬ್ದುಲ್ ರಹ್ಮಾನ್ ಹಾಜಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರಕರಣದ ಆರೋಪಿ, ವಿವಾದಿತ ಐಎಎಸ್ ಅಧಿಕಾರಿ ಶ್ರೀರಾಂ ವೆಂಕಿಟರಾಮನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶ್ರೀರಾಂ ಅವರಿಗಿದ್ದ ಅನೈತಿಕ ಸಂಬಂಧದ ಪುರಾವೆಗಳು ಬಶೀರ್ ಬಳಿ ಇತ್ತು. ಈ ವೈಷಮ್ಯವೆ ಪತ್ರಕರ್ತ ಬಶೀರ್ ಸಾವಿಗೆ ಕಾರಣವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಲ್ಲದೆ ಬಶೀರ್ ಅವರ ಮೊಬೈಲ್ ಈವರೆಗೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಕುಟುಂಬ ತಿಳಿಸಿದೆ.

ಕೊಲೆ ಮಾಡಬೇಕೆಂಬ ಉದ್ದೇಶದಿಂದಲೆ ಶ್ರೀರಾಂ ಬಶೀರ್ ಮೇಲೆ ಕಾರು ಹಾಯಿಸಿದ್ದಾರೆ. ಸಿಬಿಐ ತನಿಖೆ ನಡೆದರಷ್ಟೆ ಈ ಎಲ್ಲಾ ಸತ್ಯಗಳು ಹೊರಬರಲಿದೆ. ಈ ನಿಟ್ಟಿನಲ್ಲಿ ಸರಕಾರವನ್ನು ಆಗ್ರಹಿಸಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಕ್ಕೆ ಬಶೀರ್ ಕುಟುಂಬ ತಿಳಿಸಿದೆ.

Join Whatsapp
Exit mobile version