Home ಟಾಪ್ ಸುದ್ದಿಗಳು ಜಾರ್ಖಂಡ್: ಮಾಸ್ಕ್ ಧರಿಸದ ಸೈನಿಕನಿಗೆ ಥಳಿಸಿದ್ದ ಮೂವರು ಪೊಲೀಸರ ಅಮಾನತು

ಜಾರ್ಖಂಡ್: ಮಾಸ್ಕ್ ಧರಿಸದ ಸೈನಿಕನಿಗೆ ಥಳಿಸಿದ್ದ ಮೂವರು ಪೊಲೀಸರ ಅಮಾನತು

ರಾಂಚಿ: ಮಾಸ್ಕ್ ಧರಿಸದ ಸೈನಿಕನನ್ನು ಥಳಿಸಿದ್ದ ಜಾರ್ಖಂಡ್ ನ ಛತ್ರ ಜಿಲ್ಲೆಯ ಕರ್ಮಚೌಕ್ ಪ್ರದೇಶದ ಮಯೂರ್‌ಹಂಡ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಬೈಕ್ ನಲ್ಲಿ ಬರುತ್ತಿದ್ದ ಸೈನಿಕನನ್ನು ತಡೆದು ಪೊಲೀಸರು ಥಳಿಸಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಪೊಲೀಸರ ಈ ಕೃತ್ಯದ ವಿರುದ್ಧ ರಾಜ್ಯದಲ್ಲಿ ಭಾರೀ ಪ್ರತಿಭಟನೆಗಳೂ ನಡೆದಿತ್ತು. ಛತ್ರ ಎಸ್ಪಿ ರಾಕೇಶ್ ರಂಜನ್ ಸೂಚನೆ ಮೇರೆಗೆ ಈ ಘಟನೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ತನಿಖೆ ನಡೆಸಿದ್ದರು.

ಮಾಸ್ಕ್ ಧರಿಸದ ಯೋಧನ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಲಸಿಕೆ ಪರೀಕ್ಷೆಯ ನೇತೃತ್ವ ವಹಿಸಿದ್ದ ಬ್ಲಾಕ್ ಅಭಿವೃದ್ಧಿ ಅಧಿಕಾರಿಯಿಂದ ವರದಿ ಕೇಳಿದ್ದು, ಅದರಂತೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ.

Join Whatsapp
Exit mobile version