Home ಕ್ರೀಡೆ ಮಳೆಗೆ ಪಂದ್ಯ ರದ್ದು: ಗುಜರಾತ್ ಟೈಟಾನ್ಸ್‌ ತಂಡದ ಪ್ಲೇ ಆಫ್‌ ಕನಸು ಭಗ್ನ

ಮಳೆಗೆ ಪಂದ್ಯ ರದ್ದು: ಗುಜರಾತ್ ಟೈಟಾನ್ಸ್‌ ತಂಡದ ಪ್ಲೇ ಆಫ್‌ ಕನಸು ಭಗ್ನ

ಅಹಮದಾಬಾದ್​​: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಗುಜರಾತ್​ ಜೈಂಟ್ಸ್​ ಮತ್ತು ಕೋಲ್ಕೊತಾ ನೈಟ್​ ರೈಡರ್ಸ್​ ನಡುವಿನ ಐಪಿಎಲ್ 2024ರ 63ನೇ ಪಂದ್ಯ ರದ್ದಾಗಿದೆ. ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು.

ಇದರೊಂದಿಗೆ ಗುಜರಾತ್ ಟೈಟಾನ್ಸ್‌ ತಂಡದ ಪ್ಲೇ ಆಫ್‌ ಕನಸು ಭಗ್ನಗೊಂಡಿದೆ.ಈ ಮೂಲಕ ಈ ಐಪಿಎಲ್‌ನಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಗುಳಿದ ಮೂರನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ಲೇ ಆಫ್​ನಿಂದ ಹೊರಬಿದ್ದಿದ್ದವು. ಪಂದ್ಯ ರದ್ದಾದ ಕಾರಣ ಕೋಲ್ಕತ್ತಾ ಮತ್ತು ಗುಜರಾತ್ ತಂಡಗಳು ತಲಾ ಒಂದು ಅಂಕ ಪಡೆದವು. ಪ್ಲೇಆಫ್ ರೇಸ್​​ನಲ್ಲಿ ಉಳಿಯಲು ಗುಜರಾತ್‌ಗೆ ಎರಡು ಅಂಕಗಳ ಅಗತ್ಯವಿತ್ತು, ಪಂದ್ಯ ರದ್ದಾದ ನಂತರ ಒಂದು ಅಂಕವಷ್ಟೇ ಪಡೆದಿದೆ.

ಪಂದ್ಯ ರದ್ದಾಗಿರುವುದರಿಂದ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್‌ಗೆ ಯಾವುದೇ ಸಮಸ್ಯೆ ಆಗಲಿಲ್ಲ. ಅದು ಈಗಾಗಲೇ ಪ್ಲೇ ಆಫ್ ಪ್ರವೇಶಿಸಿದೆ. ಅಂಕ 19ಕ್ಕೆ ಏರಿದ್ದು, ಅಗ್ರಸ್ಥಾನ ಗಟ್ಟಿಗೊಂಡಿದೆ.ಇನ್ನು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್‌ ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.

ಇದು ಹಾಲಿ ಆವೃತ್ತಿಯಲ್ಲಿ ಮಳೆಯಿಂದ ರದ್ದಾಗಿರುವ ಮೊದಲ ಪಂದ್ಯವಾಗಿದೆ. ಸ್ಟೇಡಿಯಮ್​ನಲ್ಲಿ ಸೇರಿದ್ದ 45,000 ಅಭಿಮಾನಿಗಳು ಪಂದ್ಯ ಆರಂಭವಾಗುವ ನಿರೀಕ್ಷೆಯಿಂದ ಸ್ಥಳದಿಂದ ಕದಲಿರಲಿಲ್ಲ. ರಾತ್ರಿ 10:56 ಕ್ಕೆ 5 ಓವರ್​ಗಳ ಪಂದ್ಯದ ಕಟ್ ಆಫ್ ಸಮಯವಾಗಿತ್ತು. ಮೈದಾನದ ಸಿಬ್ಬಂದಿ ಎಲ್ಲ ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಆಡಿಲು ಯಾವುದೇ ಅವಕಾಶ ದೊರೆಯಲಿಲ್ಲ. ರಾತ್ರಿ 10:40 ರ ಸುಮಾರಿಗೆ ಅಧಿಕಾರಿಗಳು ಪಂದ್ಯವನ್ನು ರದ್ದುಗೊಳಿಸಿದಾಗಿ ಘೋಷಿಸಿದರು.

ಈ ಪಂದ್ಯ ರದ್ದಾಗುವ ಮೂಲಕ ಜಿಟಿ ಪ್ಲೇಆಫ್‌ನಿಂದ ಹೊರ ಬಿದ್ದಿತು. ಆ ಮೂಲಕ ಐಪಿಎಲ್‌ ಸೀನಸ್‌ 17ರ ಪಯಣ ಇಲ್ಲಿಗೆ ಅಂತ್ಯಗೊಂಡಿದೆ.

Join Whatsapp
Exit mobile version