ದರಾಬಾದ್ : ಜಾರ್ಖಂಡ್ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ಗೆ ಆಪರೇಷನ್ ಭೀತಿ ಶುರುವಾಗಿದೆ. ತನ್ನ ಶಾಸಕರನ್ನು ಹೈದರಾಬಾದ್ ಹೊರವಲಯದಲ್ಲಿರುವ ರೆಸಾರ್ಟ್ ನಲ್ಲಿ ಕಲೆಹಾಕಲಾಗಿದೆ. ಸೋಮವಾರದವರೆಗೂ ಅಲ್ಲೇ ಇರಿಸಲಾಗುತ್ತದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಚಂಪೈ ಸೋರೆನ್ ನಾಳೆ (ಸೋಮವಾರ) ಸದನದಲ್ಲಿ ತಮ್ಮ ಬಲಾಬಲ ಪ್ರದರ್ಶಿಸಲಿದ್ದಾರೆ. ಅದೇ ದಿನದಂದು ಕಾಂಗ್ರೆಸ್ ಶಾಸಕರನ್ನು ನೇರವಾಗಿ ಕರೆತರಲಾಗುತ್ತದೆ.
ಜಾರ್ಖಂಡ್‌ನಲ್ಲಿ ಜೆಎಂಎಂ -29, ಕಾಂಗ್ರೆಸ್ -16, ಆರ್‌ಜೆಡಿ-1 ಸ್ಥಾನಗಳಲ್ಲಿ ಜಯಗಳಿಸಿ ಸರ್ಕಾರ ನಡೆಸುತ್ತಿದೆ. 41 ಸ್ಥಾನಗಳನ್ನು ಪಡೆದವರು ಸರ್ಕಾರ ರಚಿಸಬಹುದಾಗಿದೆ. ಬಿಜೆಪಿಪಿ 32 ಸ್ಥಾನಗಳನ್ನು ಹೊಂದಿದ್ದು, ಕೇವಲ 9 ಸ್ಥಾನ ಕಡಿಮೆ ಇರುವುದರಿಂದ ಕಾಂಗ್ರೆಸ್ ಮತ್ತು ಜೆಎಂಎಂಗೆ ಆಪರೇಷನ್ ಭೀತಿ ಎದುರಾಗಿದೆ.