Home ಟಾಪ್ ಸುದ್ದಿಗಳು ನ್ಯಾಯಾಧೀಶರ ಕೊಲೆ ಪ್ರಕರಣ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ : ಸುಪ್ರೀಮ್ ಕೋರ್ಟ್ ನಿಂದ ಕಠಿಣ ಕ್ರಮದ...

ನ್ಯಾಯಾಧೀಶರ ಕೊಲೆ ಪ್ರಕರಣ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆ : ಸುಪ್ರೀಮ್ ಕೋರ್ಟ್ ನಿಂದ ಕಠಿಣ ಕ್ರಮದ ಭರವಸೆ

ಇಬ್ಬರು ಆರೋಪಿಗಳ ಬಂಧನ

ಜಾರ್ಖಂಡ್ ಜುಲೈ 29: ಜಾರ್ಖಂಡ್ ನಲ್ಲಿ ಬುಧವಾರ ನ್ಯಾಯಾಧೀಶರನ್ನು ಅಪಘಾತವೆಂಬಂತೆ ಬಿಂಬಿಸಿ ಕೊಲೆ ಮಾಡಿರುವ ದುಷ್ಕ್ರತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೊಲೆ ಪ್ರಕರಣವನ್ನು ಇಂದು ಸುಪ್ರೀಮ್ ಕೋರ್ಟ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಈ ಸಂಬಂಧ ಜಾರ್ಖಂಡ್ ಹೈಕೋರ್ಟ್ ನ ಗಮನಕ್ಕೆ ತರಲಾಗಿದೆ. ಮಾತ್ರವಲ್ಲದೆ ಈ ಪ್ರಕರಣದ ಕುರಿತು ವಿಶೇಷ ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಉತ್ತಮ್ ಆನಂದ್ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಂಪೋ ಚಾಲಕ ಮತ್ತು ಆತನ ಸಹಾಯಕನನ್ನು ಪೊಲೀಸರು ಧನ್ಬಾದಲ್ಲಿ ಬಂಧಿಸಲಾಗಿದೆಯೆಂದು ತಿಳಿಸಿದ್ದಾರೆ.

ನ್ಯಾಯಧೀಶರಾದ ಉತ್ತಮ್ ಅನಂದ್ ಅವರು ಬೆಳಗ್ಗಿನ ಜಾಗಿಂಗ್ ಮಾಡುತ್ತಿದ್ದಾಗ ದನ್ಬಾದ ತನ್ನ ಮನೆಯಿಂದ ಅರ್ಧ ಕಿ. ಮೀ ಅಣತಿ ದೂರದಲ್ಲಿ ಆನಂದ್ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತಮ್ ಆನಂದ್ ಅವರು ಬೆಳಗೆ 5 ಘಂಟೆಗೆ ಜಾಗಿಂಗ್ ವೇಳೆಯಲ್ಲಿ ಟೆಂಪೋ ನೇರವಾಗಿ ಅವರ ಮೇಲೆ ಹರಿದು ಕೊಲೆ ಮಾಡಿರುವುದು ಸಿಸಿಟಿವಿ ಯಿಂದ ಬಹಿರಂಗವಾಗಿದೆ. ಗಂಭೀರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ಆನಂದ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ದಾರಿಮಧ್ಯೆ ಆನಂದ್ ಅವರು ಕೊನೆಯುಸಿರೆಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 7 ಘಂಟೆಯಾದರೂ ಆನಂದ್ ಮನೆಗೆ ಹಿಂತಿರುಗದಿದ್ದಾಗ ಅವರ ಕುಟುಂಬಸ್ಥರು ಕಾಣೆಯಾಗಿರುವ ಕುರಿತು ಸ್ಥಳೀಯ ಠಾಣೆಗೆ ದೂರು ನೀಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆನಂದ್ ಅವರ ಕೊಲೆ ಗಂಭೀರವಾಗಿ ಪರಿಗಣಿಸಿರುವ ದನ್ಬಾ ಪೊಲೀಸರು ಅವರ ಕೊಲೆಯಲ್ಲಿ ಮಾಫಿಯಾದ ಕೈವಾಡವನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಆನಂದ್ ಅವರ ಕೊಲೆಗೆ ಉಪಯೋಗಿಸಿದ ಟೆಂಪೋವನ್ನು ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗವಾಗಿದೆಯೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.


ಈ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಈ ಪ್ರಕರಣವನ್ನು ಜಾರ್ಖಂಡ್ ಹೈಕೋರ್ಟ್ ನ ಗಮನಕ್ಕೆ ತರಲಾಗಿದೆ. ಮಾತ್ರವಲ್ಲದೇ ಇದರ ಬಗ್ಗೆ ವಿಶೇಷ ಕಾಳಜಿ ವಹಿಸುವುದಾಗಿ ನ್ಯಾಯಮೂರ್ತಿ ರಮಣ ಅವರು ತಿಳಿಸಿದ್ದಾರೆ.

Join Whatsapp
Exit mobile version