ಮುಂಬೈ: ಕೆನರಾ ಬ್ಯಾಂಕ್ ನ 538 ಕೋಟಿ ರೂ. ವಂಚನೆ ಪ್ರಕರಣ ಸಮಬಂಧ ಜಾರಿ ನಿರ್ದೇಶನಾಲಯವು ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಬಂಧಿಸಿದೆ.
ಪಿಎಂಎಲ್ ಎ ಕಾಯ್ದೆಯಡಿ ನರೇಶ್ ಗೋಯಲ್ ಅವರನ್ನು ವಶಕ್ಕೆ ಪಡೆದ ಅಧಿಕಾರಿಗಳು, ಶನಿವಾರ ಸತತ ಏಳು ಗಂಟೆಗಳ ಕಾಲ ಮುಂಬೈನಲ್ಲಿ ವಿಚಾರಣೆ ನಡೆಸಿದ ನಂತರ ಬಂಧಿಸಿದ್ದಾರೆ.