Home Uncategorized ಜೀನ್ಸ್ ಭಾರತೀಯ ಸಂಸ್ಕೃತಿಯಲ್ಲ: ತೀರ್ಥ ಸಿಂಗ್ ರಾವತ್

ಜೀನ್ಸ್ ಭಾರತೀಯ ಸಂಸ್ಕೃತಿಯಲ್ಲ: ತೀರ್ಥ ಸಿಂಗ್ ರಾವತ್

ಡೆಹ್ರಾಡೂನ್: ಜೀನ್ಸ್ ಉಡುಪು ಭಾರತದ ಸಂಸ್ಕೃತಿಯ ಭಾಗವಲ್ಲ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತೀರ್ಥ ಸಿಂಗ್ ರಾವತ್ ಹೇಳಿದ್ದಾರೆ.

ಹರಿದ ಜೀನ್ಸ್ ಕುರಿತ ನನ್ನ ಹೇಳಿಕೆಯಲ್ಲಿ ಈಗಲೂ ಬದ್ಧನಾಗಿದ್ದೇನೆ. ನನ್ನ ಅಭಿಪ್ರಾಯಕ್ಕೆ ಹಲವು ಜನರು ಬೆಂಬಲ ಸೂಚಿಸಿದ್ದಾರೆ ಎಂದು ರಾವತ್ ಹೇಳಿದರು.


ಕಳೆದ ವರ್ಷ ತೀರ್ಥ ಸಿಂಗ್ ರಾವತ್ ಅವರು ಯುವತಿಯರು ಹರಿದ ಮಾಡೆಲ್ ಜೀನ್ಸ್ ಧರಿಸುವುದನ್ನು ಟೀಕಿಸಿದ್ದು ಬಹುದೊಡ್ಡ ವಿವಾದವನ್ನು ಹುಟ್ಟು ಹಾಕಿತ್ತು. ಯುವಕರು ಹರಿದ ಜೀನ್ಸ್ ಖರೀದಿಸಲು ಹೋಗುತ್ತಾರೆ ಅದು ಸಿಗದಿದ್ದರೆ ಕತ್ತರಿಯಿಂದ ಕತ್ತರಿಸಿಕೊಳ್ಳುತ್ತಾರೆ ಎಂದು ಕೂಡ ರಾವತ್ ಲೇವಡಿ ಮಾಡಿದ್ದರು.


ತೀರ್ಥ ಸಿಂಗ್ ರ ಈ ಹೇಳಿಕೆಯನ್ನು ಉತ್ತರಾಖಂಡ ಕಾಂಗ್ರೆಸ್ ಅಧ್ಯಕ್ಷ ಪ್ರೀತಂ ಸಿಂಗ್ ವಿರೋಧಿಸಿದ್ದಾರೆ. ಒಬ್ಬರು ಯಾವ ರೀತಿಯ ಬಟ್ಟೆ ಧರಿಸಿದ್ದಾರೆ ಎಂದು ಅಪಮಾನಕರ ಹೇಳಿಕೆ ನೀಡುವುದು ಒಬ್ಬ ಮುಖ್ಯಮಂತ್ರಿ ಗೆ ಉಚಿತವಲ್ಲ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಗರಿಮ ದಸೌನಿ ಹೇಳಿದ್ದಾರೆ. ಇಂತಹ ಹೇಳಿಕೆಗಳು ಸಾರ್ವಜನಿಕ ಭಾವನೆಗೆ ಹಾನಿ ತರುವಂತಹದ್ದಾಗಿದ್ದು ತೀರ್ಥ ಸಿಂಗ್ ಅರೋಚಕ ಹೇಳಿಕೆ ನೀಡುತ್ತಿದ್ದಾರೆ ಎಂದು ಆಮ್ ಆದ್ಮಿಯೂ ಕಾಲೆಳೆದಿದೆ.

Join Whatsapp
Exit mobile version