Home ಟಾಪ್ ಸುದ್ದಿಗಳು ಪಕ್ಷ ಬಿಡುವ ಸುಳಿವು: ಜೆಡಿಎಸ್‌ ಗ್ರೂಪ್‌ನಿಂದ ಹೊರಬಂದ ಶಾಸಕ ಶಿವಲಿಂಗೇಗೌಡ

ಪಕ್ಷ ಬಿಡುವ ಸುಳಿವು: ಜೆಡಿಎಸ್‌ ಗ್ರೂಪ್‌ನಿಂದ ಹೊರಬಂದ ಶಾಸಕ ಶಿವಲಿಂಗೇಗೌಡ

ಹಾಸನ : ಜೆಡಿಎಸ್‌ ಪಕ್ಷದಿಂದ ಹೊರ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದರು. ಇದೀಗ ಕಳೆದ ಕೆಲವು ತಿಂಗಳಿನಿಂದ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಪಕ್ಷದ ಹಲವು ವಾಟ್ಸಪ್‌ ಗ್ರೂಪ್‌ಗಳಿಂದ ಹೊರ ಬರುವ ಮೂಲಕ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.

ಜೆಡಿಎಸ್‌ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಬೇಕೆಂಬ ಯೋಜನೆಯಲ್ಲಿ ರಚನೆ ಮಾಡಿದ್ದ 2023ಕ್ಕೆ ಜನತಾ ಸರಕಾರ, ಕನ್ನಡ ನಾಡಿನ ಜೆಡಿಎಸ್ ಪಡೆ , ವಿಜಯಪುರ ಜೆಡಿಎಸ್‌, ದಳಪತಿಗಳು ಎನ್ನುವ ವಾಟ್ಸಪ್‌ ಗುಂಪುಗಳಿಂದ ಅರಸೀಕರೆ ಶಾಸಕರು ಹೊರಬಂದಿದ್ದಾರೆ. ಈ ಗುಂಪುಗಳಲ್ಲಿ ಪಕ್ಷದ ಪ್ರಮುಖ ನಾಯಕರು, ಕೆಲವು ಶಾಸಕರು, ಶಾಸಕರ ಆಪ್ತ ಕಾರ್ಯದರ್ಶಿಗಳು ಇದ್ದರು.

ಕೆಲವು ದಿನಗಳ ಹಿಂದೆ ಶಿವಲಿಂಗೇಗೌಡ ವಿರುದ್ಧ ಬಹಿರಂಗ ಸಭೆಯಲ್ಲೇ ಪಕ್ಷದ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದರು. ಆದಾದ ಕೆಲವು ದಿನಗಳಿಂದ ಶಿವಲಿಂಗೇಗೌಡ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ಇದೀಗ ವಾಟ್ಸಪ್‌ ಗುಂಪಿನಿಂದ ಹೊರ ಬರುವ ಮೂಲಕ ಅಧಿಕೃತವಾಗಿ ಪಕ್ಷದಿಂದ ಹೊರಬರುವ ಸೂಚನೆ ನೀಡಿದ್ದಾರೆ.

Join Whatsapp
Exit mobile version