Home ಟಾಪ್ ಸುದ್ದಿಗಳು ಅಫ್ಘಾನಿಸ್ಥಾನ ಉದ್ಯಮಿಗಳಿಗೆ ವೀಸಾ ನೀಡಲು ಮುಂದಾದ ಚೀನಾ

ಅಫ್ಘಾನಿಸ್ಥಾನ ಉದ್ಯಮಿಗಳಿಗೆ ವೀಸಾ ನೀಡಲು ಮುಂದಾದ ಚೀನಾ

ಕಾಬೂಲ್: ಅಫ್ಘಾನ್ ಉದ್ಯಮಿಗಳಿಗೆ ವೀಸಾ ನೀಡಲು ಚೀನಾ ಮುಂದಾಗಿದ್ದು, ಈ ಕುರಿತು ಸಿದ್ಧತೆ ನಡೆಸುತ್ತಿದೆ ಎಂದು ಅಫ್ಘಾನಿಸ್ತಾನದಲ್ಲಿರುವ ಚೀನಾ ರಾಯಭಾರಿ ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ಚೀನಾದ ರಾಯಭಾರಿ ವಾಂಗ್ ಯು ಮತ್ತು ತಾಲಿಬಾನ್‌ನ ಹಾಲಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ನಡುವಿನ ಮಾತುಕತೆಯ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭೂಕಂಪ ಪರಿಹಾರ, ರಾಜಕೀಯ ಕುಂದುಕೊರತೆಗಳು, ದ್ವಿಪಕ್ಷೀಯ ವ್ಯಾಪಾರ, ಮಾನವೀಯ ನೆರವು ಮತ್ತು ಅಫ್ಘಾನ್ ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಚೀನಾಕ್ಕೆ ಮರಳಿ ಕಳುಹಿಸುವ ಕುರಿತು ಉಭಯ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ದುಲ್ ಕಹರ್ ಬಾಲ್ಖಿ ತಿಳಿಸಿದ್ದಾರೆ.

ಭೂಕಂಪದಿಂದ ಉಂಟಾದ ವಿನಾಶಕ್ಕೆ ಪರಿಹಾರವಾಗಿ ಚೀನಾ ಸರ್ಕಾರವು ಈಗಾಗಲೇ $7.5 ಮಿಲಿಯನ್ ಮೊತ್ತದ ನೆರವನ್ನು ಘೋಷಿಸಿದೆ.

Join Whatsapp
Exit mobile version