Home ಟಾಪ್ ಸುದ್ದಿಗಳು ಜಯಲಲಿತಾ ದತ್ತು ಪುತ್ರ ಸುಧಾಕರನ್ ಜೈಲಿನಿಂದ ಬಿಡುಗಡೆ

ಜಯಲಲಿತಾ ದತ್ತು ಪುತ್ರ ಸುಧಾಕರನ್ ಜೈಲಿನಿಂದ ಬಿಡುಗಡೆ

ಬೆಂಗಳೂರು : ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ಸೋದರಳಿಯ ಹಾಗೂ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಅವರ ದತ್ತು ಪುತ್ರ ಸುಧಾಕರನ್ ಶನಿವಾರ ಸಂಜೆ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.


ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸುಧಾಕರನ್ಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು. 2017 ರಲ್ಲಿ ಶಶಿಕಲಾ, ಇಳವರಸಿ, ಸುಧಾಕರನ್ಗೆ 10 ಕೋಟಿ ದಂಡ ವಿಧಿಸಲಾಗಿತ್ತು.
ಶಶಿಕಲಾ ಮತ್ತು ಇಳವರಸಿ ಇಬ್ಬರಿಗೂ 10 ಕೋಟಿಯಂತೆ ದಂಡ ಕಟ್ಟಿ ಬಿಡುಗಡೆ ಹೊಂದಿದ್ದರು. ಸುಧಾಕರನ್ ದಂಡ ಕಟ್ಟದ ಹಿನ್ನೆಲೆಯಲ್ಲಿ 1 ವರ್ಷ ಹೆಚ್ಚು ಜೈಲುವಾಸ ಮುಂದುವರಿಸಲಾಗಿತ್ತು. ಇದೀಗ ಹೆಚ್ಚುವರಿ ಜೈಲು ಶಿಕ್ಷೆ ಮುಕ್ತಾಯಗೊಂಡಿದ್ದು, ಇಂದು ಸೆರೆವಾಸದಿಂದ ಮುಕ್ತರಾಗಿದ್ದಾರೆ.


ಅಪರಾಧಿಗಳನ್ನು ಬಿಡುಗಡೆ ಮಾಡುವಾಗ ಅವರು ತೆಗೆದುಕೊಂಡ ರಜೆಗಳ ಸಂಖ್ಯೆಯನ್ನು (ಪೆರೋಲ್) ನಾವು ಪರಿಗಣಿಸುತ್ತೇವೆ. ಸುಧಾಕರನ್ 89 ದಿನಗಳ ಪೆರೋಲ್ಗೆ ಅರ್ಹರಾಗಿದ್ದರು ಆದರೆ, ಅವರು ಒಂದು ಸಲವೂ ಪೆರೋಲ್ ಮೇಲೆ ಹೊರ ಹೋಗಿಲ್ಲ. ಹೀಗಾಗಿ ಅವರ ಶಿಕ್ಷೆಯನ್ನು 89 ದಿನಗಳವರೆಗೆ ಕಡಿಮೆ ಮಾಡಲಾಗಿದೆ. ಈ ಕಾರಣದಿಂದಾಗಿ, ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಸುಧಾಕರನ್ ಅವರನ್ನು ಇಂದು ಬಿಡುಗಡೆ ಮಾಡಲಾಗುತ್ತದೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp
Exit mobile version