Home ಟಾಪ್ ಸುದ್ದಿಗಳು ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ನಾಲ್ವರು CRPF ಸಿಬ್ಬಂದಿಗೆ ಗಾಯ

ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ನಾಲ್ವರು CRPF ಸಿಬ್ಬಂದಿಗೆ ಗಾಯ

ರಾಯ್ಪುರ: ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿ ಕೇಂದ್ರ ಮೀಸಲು ಪೊಲೀಸ್ ಪಡೆ ನಾಲ್ವರು ಸಿಬ್ಬಂದಿ ಗಾಯಗೊಂಡ ಘಟನೆ ಛತ್ತೀಸ್ ಗಢದ ರಾಯ್ಪರದಲ್ಲಿ ನಡೆದಿದೆ.


ಇಂದು ಬೆಳಗ್ಗೆ 6.30ರ ವೇಳೆಗೆ ಸಿ ಆರ್ ಪಿ ಎಫ್ ನ 122ನೇ ಬೆಟಾಲಿಯನ್ ಸಿಬ್ಬಂದಿ ಡಿಟೋನೇಟರ್ ಸ್ಥಳಾಂತರಿಸಲೆಂದು ಜಮ್ಮುವಿಗೆ ತೆರಳಲು ವಿಶೇಷ ರೈಲು ಹತ್ತಿದ್ದಾರೆ. ರೈಲು ಹೊರಡುವ ಮುನ್ನ ಇಗ್ನೈಟರ್ ಸೆಟ್ ವುಳ್ಳ ಬಾಕ್ಸ್ ಬೋಗಿಯೊಳಗೆ ಬಿದ್ದಿದ್ದು, ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.


ಗಾಯಗೊಂಡ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

Join Whatsapp
Exit mobile version