ನ್ಯೂಯಾರ್ಕ್: ಜಪಾನಿನ ರಸಾಯನಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಇಯಿಚಿ ನೆಗಿಶಿ(85) ನಿಧನರಾಗಿದ್ದಾರೆ. ಇಲ್ಟ್ರಾನಿಕ್ ಮತ್ತು ಔಷಧೀಯ ಉದ್ಯಮದಲ್ಲಿ ಬಳಸುವ ಸಂಕೀರ್ಣ ರಾಸಾಯನಿಕ ಸಂಯುಕ್ತಗಳನ್ನು ಅಭಿವೃದ್ಧಿಪಡಿಸಿದ ರಸಾಯನಶಾಸ್ತ್ರಜ್ಞರಾಗಿದ್ದಾರೆ ನೆಗಿಶಿ.
ಮಂಚೂರಿಯಾದ ಟೋಕಿಯೋ ವಿಶ್ವವಿದ್ಯಾಲಯದಿಂದ ಪದವಿ ಪಡೆದ ನೆಗಿಶಿ, ಜಪಾನ್ ನ ರಾಸಾಯನಿಕ ಕಾರ್ಖಾನೆಯಾದ ಟೇಜಿನ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಫುಲ್ ಬ್ರೈಟ್ ಸ್ಕಾಲರ್ಶಿಪ್ ನೊಂದಿಗೆ 1960 ರಲ್ಲಿ ರಸಾಯನಶಾಸ್ತ್ರ ಅಧ್ಯಯನಕ್ಕಾಗಿ ಅಮೆರಿಕಾಗೆ ಬಂದರು. ನಂತರ ಅವರು ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾದರು.
2010 ರಲ್ಲಿ ಅವರು ರಸಾಯನಶಾಸ್ತ್ರಕ್ಕೆ ಲಭಿಸಿದ ನೋಬೆಲ್ ಪುರಸ್ಕಾರವನ್ನು ರಿಚರ್ಡ್ ಹೆಕ್ ಮತ್ತು ಅಕಿರಾ ಸುಝುಕಿ ಅವರೊಂದಿಗೆ ಹಂಚಿಕೊಂಡರು.