Home ಟಾಪ್ ಸುದ್ದಿಗಳು ನಟಿ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ ಖಂಡಿಸಿ ಲಕ್ಷದ್ವೀಪದ 15 ಬಿಜೆಪಿ ಮುಖಂಡರ ರಾಜೀನಾಮೆ

ನಟಿ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ ಖಂಡಿಸಿ ಲಕ್ಷದ್ವೀಪದ 15 ಬಿಜೆಪಿ ಮುಖಂಡರ ರಾಜೀನಾಮೆ

ತಿರುವನಂತಪುರಂ : ಲಕ್ಷದ್ವೀಪ ಆಡಳಿತಾಧಿಕಾರಿಯ ಕ್ರಮಗಳನ್ನು ವಿರೋಧಿಸಿ ಹೇಳಿಕೆ ನೀಡಿದ್ದ ನಟಿ, ನಿರ್ದೇಶಕಿ ಆಯಿಷಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದುದನ್ನು ವಿರೋಧಿಸಿ, ಅಲ್ಲಿನ ಸುಮಾರು 15 ಬಿಜೆಪಿ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮೇ ತಿಂಗಳಿನಿಂದ ಇಲ್ಲಿ ಬಿಜೆಪಿಯನ್ನು ತೊರೆಯುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಜನರಿಗೆ ಒಳ್ಳೆಯದ್ದನ್ನು ಮಾಡದ ಪಕ್ಷದಲ್ಲಿ ಮುಂದುವರಿಯುಲು ಯಾವುದೇ ಕಾರಣ ಉಳಿದಿಲ್ಲ ಎಂದು ಬಿಜೆಪಿಯ ಬಿತ್ರಾ ದ್ವೀಪದ ಮಾಜಿ ಅಧ್ಯಕ್ಷ ಅಬ್ದುಲ್‌ ಹಮೀದ್‌ ತಿಳಿಸಿದ್ದಾರೆ.

ಏನೋ ಒಂದು ವಿಷಯ ಹೇಳಿದ್ದಕ್ಕೆ ಬಿಜೆಪಿ ಅಧ್ಯಕ್ಷರು ಆ ಹೆಣ್ಣು ಮಗಳ ಮೇಲೆ ದೂರು ದಾಖಲಿಸಿದ್ದಾರೆ. ಅದನ್ನು ಸುಮ್ಮನೆ ನಿರ್ಲಕ್ಷಿಸುವುದು ಬಿಟ್ಟು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೇ ರೀತಿಯ ಅಭಿಪ್ರಾಯಗಳನ್ನು ಪಕ್ಷಕ್ಕೆ ರಾಜೀನಾಮೆ ನೀಡಿದ ಇತರ ಮುಖಂಡರೂ ವ್ಯಕ್ತಪಡಿಸಿದ್ದಾರೆ.

ಲಕ್ಷದ್ವೀಪದ ಆಡಳಿತಾಧಿಕಾರಿ ದ್ವೀಪದಲ್ಲಿ ಕೇಸರೀಕರಣಕ್ಕೆ ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆಡಳಿತಾಧಿಕಾರಿಯ ಹೊಸ ನಿಯಮಗಳನ್ನು ವಿರೋಧಿಸಿ, ಅವರನ್ನು ಬದಲಾಯಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ.

Join Whatsapp
Exit mobile version