Home ಟಾಪ್ ಸುದ್ದಿಗಳು ಜಮ್ಮು ಕಾಶ್ಮೀರ: ಗೀಲಾನಿ ಮೊಮ್ಮಗ ಸರ್ಕಾರಿ ಕೆಲಸದಿಂದ ವಜಾ

ಜಮ್ಮು ಕಾಶ್ಮೀರ: ಗೀಲಾನಿ ಮೊಮ್ಮಗ ಸರ್ಕಾರಿ ಕೆಲಸದಿಂದ ವಜಾ

ಶ್ರೀನಗರ: ಇತ್ತೀಚೆಗೆ ನಿಧನರಾದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ಮೊಮ್ಮಗ ಅನೀಸ್ ಉಲ್ ಇಸ್ಲಾಮ್ ಅವರನ್ನು ಸರ್ಕಾರಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಅನೀಸ್ ಉಲ್ ಇಸ್ಲಾಮ್ ಸರ್ಕಾರಿ ಸ್ವಾಮ್ಯದ ಕನ್ವೆನ್ಶನ್ ಕೇಂದ್ರದಲ್ಲಿ ಸಂಶೋಧನಾ ಅಧಿಕಾರಿ ಯಾಗಿ ಕೆಲಸ ಮಾಡುತ್ತಿದ್ದರು.


ಜಮ್ಮು-ಕಾಶ್ಮಿರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಅವರು ನೆರವು ನೀಡುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಇದೀಗ ಸಂವಿಧಾನದ ಕಲಂ 311 (2) (ಸಿ) ಅಡಿಯಲ್ಲಿ ಬರುವ ವಿಶೇಷ ನಿಬಂಧನೆಗಳ ಅನುಸಾರ ಅವರನ್ನು ವಜಾಗೊಳಿಸಲಾಗಿದೆ.

Join Whatsapp
Exit mobile version