Home ಟಾಪ್ ಸುದ್ದಿಗಳು ಕಾರ್ಮಿಕ ಪರಿಷತ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರಾಗಿ ಜಾಬಿರ್ ಅತ್ತಾಸ್ ಆಯ್ಕೆ

ಕಾರ್ಮಿಕ ಪರಿಷತ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರಾಗಿ ಜಾಬಿರ್ ಅತ್ತಾಸ್ ಆಯ್ಕೆ

ಬೆಂಗಳೂರ: ಕರ್ನಾಟಕದ ಕಾರ್ಮಿಕ ಪರ ಮುಂಚೂಣಿ ಸಂಸ್ಥೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರಾಗಿ ಕಾರ್ಮಿಕ ಮುಖಂಡ ಜಾಬಿರ್ ಅತ್ತಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಮಂಗಳೂರು ಮೂಲದ ಜಾಬಿರ್ ಅವರು ಹೋಟೆಲ್ ಉದ್ಯಮಿಯಾಗಿದ್ದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಅಲ್ಪಸಂಖ್ಯಾತ ವಿಭಾಗದ ಬೆಂಗಳೂರು ನಗರ ಅಧ್ಯಕ್ಷರಾಗಿ ನಂತರ ರಾಜ್ಯ ಕಾರ್ಯಾಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ ಇವರನ್ನು ಕಾರ್ಮಿಕ ಪರಿಷತ್ ಕಚೇರಿಯಲ್ಲಿ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷರ ಆಯ್ಕೆಗಾಗಿ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಪದಾಧಿಕಾರಿಗಳ ನಿರ್ಣಯದ ನಂತರ ಆಯ್ಕೆ ಪ್ರಮಾಣ ಪತ್ರವನ್ನು ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರ್, ಜಾಬೀರ್ ಅತ್ತಾಸ್ ಅವರು ಕಾರ್ಮಿಕರ ಹಿತ ಕಾಯುವಲ್ಲಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲಾ ವರ್ಗದ ಕಾರ್ಮಿಕರ ಪರವಾಗಿ ನಿಂತು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಕಾರ್ಮಿಕ ಪರ ನಿಂತ ಇವರ ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿ, ಕಾರ್ಮಿಕ ಪರಿಷತ್ ವತಿಯಿಂದ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಾಬಿರ್ ಅತ್ತಾಸ್, ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಜನರ ಸೇವೆ ಮಾಡಲು ಸಾಧ್ಯವಾಯಿತು. ನಾನು ಸದಾ ಕಾರ್ಮಿಕ ಪರಿಷತ್’ಗೆ ಚಿರಋಣಿ ಅಲ್ಲದೆ ನೊಂದವರಿಗೆ ಶೋಷಿತರಿಗೆ ಕಾರ್ಮಿಕ ವರ್ಗಕ್ಕೆ ಯಾವುದೇ ರೀತಿಯ ತೊಂದರೆ ಆದರೂ ಎಂತಹ ಕಠಿಣ ಹೋರಾಟಕ್ಕೂ ನಾವು ಸಿದ್ಧ. ದುಡಿದು ತಿನ್ನುವ ವರ್ಗವನ್ನು ಹಿಂಸಿಸುವ ಯಾರೇ ಆಗಲಿ ಅವರಿಗೆ ಶಿಕ್ಷೆ ಕೊಡಿಸುವವರೆಗೂ ವಿಶ್ರಮಿಸುವುದಿಲ್ಲ ಎಂದು ಹೇಳಿದರು.


ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಣಿಕಂಠ. ಕ್ರೈಂ ಫೈಲ್ ಪತ್ರಿಕೆಯ ಸಂಪಾದಕ ಅಮಿತ್ ಗೋವಿಂದ್, ನ್ಯಾಷನಲ್ ಅವಾರ್ಡ್ ವಿಜೇತ ಗಂಗಾಧರ್, ಕಾರ್ಮಿಕ ಪರಿಷತ್ ಬೆಂಗಳೂರು ನಗರ ಕಾರ್ಯದರ್ಶಿ ಹರೀಶ್, ಕಚೇರಿ ಕಾರ್ಯನಿರ್ವಹಣಾಧಿಕಾರಿ ಉಮಾ ಅಂಚೆಪಾಳ್ಯ ಮತ್ತಿತರರು ಪಾಲ್ಗೊಂಡಿದ್ದರು,

Join Whatsapp
Exit mobile version