ಜಲೀಲ್ ಹತ್ಯೆ ಖಂಡಿಸಿ ಸಿಪಿಎಂ, ಸಿಪಿಐ ಪ್ರತಿಭಟನೆ

Prasthutha|

ಮಂಗಳೂರು: ಸುರತ್ಕಲ್’ನ ಕೃಷ್ಣಾಪುರದಲ್ಲಿ ನಡೆದ ವ್ಯಾಪಾರಿ ಜಲೀಲ್ ಅವರ ಹತ್ಯೆಯನ್ನು ಖಂಡಿಸಿ ಸಿಪಿಐ ಮತ್ತು ಸಿಪಿಎಂ ಕಾರ್ಯಕರ್ತರು ಬುಧವಾರ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.

- Advertisement -


ಸೌಹಾರ್ದದ ಮಂಗಳೂರನ್ನು ಕೊಲೆಗಾರರ ಮಂಗಳೂರು ಮಾಡಬೇಡಿ ಎಂದು ಸಿಪಿಐ ಮತ್ತು ಸಿಪಿಎಂನವರು ಒಗ್ಗಟ್ಟಿನ ಪ್ರದರ್ಶನ ಮಾಡಿದರು.


ಸುರತ್ಕಲ್’ನ ಕೃಷ್ಣಾಪುರದಲ್ಲಿ ವ್ಯಾಪಾರಿ ಜಲೀಲ್ ಅವರನ್ನು ಕೊಲೆ ನಡೆಸಿದ ಸಂಘಪರಿವಾರದವರು ಜಿಲ್ಲೆಯಲ್ಲಿ ಅನೈತಿಕ ಪೊಲೀಸ್’ಗಿರಿ ನಡೆಸುವುದನ್ನು ಪೊಲೀಸ್ ಇಲಾಖೆ ತಡೆದು ಕಠಿಣ ಕ್ರಮಕೈಗೊಳ್ಳಬೇಕು. ಜಾತ್ಯತೀತ ದೇಶದಲ್ಲಿ ಜಾತಿಯ ಆಧಾರದಲ್ಲಿ ಪರಿಹಾರ ನೀಡುವುದನ್ನು ನಿಲ್ಲಿಸಬೇಕು ಎಂದು ಸಿಪಿಐನ ಮುಖಂಡ ಸೀತಾರಾಮ ಬೇರಿಂಜೆ ಆಗ್ರಹಿಸಿದರು.
ಸಿಪಿಎಂನ ಮತ್ತೋರ್ವ ಮುಖಂಡ ಯಾದವ ಶೆಟ್ಟಿ ಮಾತನಾಡಿ, ಕಳೆದ 30 ವರ್ಷಗಳಿಂದ ಸಂಘ ಪರಿವಾರದವರು ನಾನಾ ಸುಳ್ಳು ಪ್ರಚಾರ, ಹಲ್ಲೆ, ಕೊಲೆ ನಡೆಸಿದ್ದಾರೆ. ಪೊಲೀಸರು ಇವನ್ನೆಲ್ಲ ಸರಿಯಾಗಿ ಗಮನಿಸಿ ಕೆಲಸ ಮಾಡಬೇಕು. ಕೋಮುವಾದಿ ಗೂಂಡಾಗಳನ್ನು ಮಟ್ಟ ಹಾಕಬೇಕು. ಬಿಜೆಪಿ ಸರಕಾರವು ಮುಸ್ಲಿಮರ ಕೊಲೆಯಾದರೆ ಅದರಲ್ಲೂ ರಾಜಕೀಯ ಮಾಡುವುದು ಖಂಡನೀಯ, ನಾಚಿಕೆಗೇಡಿನದು ಎಂದು ಅವರು ಹೇಳಿದರು.

- Advertisement -


ಮುಖಂಡರಾದ ಬಿ. ಶೇಖರ್, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ, ಸುಲೋಚನ ಮೊದಲಾದವರು ಉಪಸ್ಥಿತರಿದ್ದರು

Join Whatsapp
Exit mobile version