Home ಟಾಪ್ ಸುದ್ದಿಗಳು ಜುಲೈ 25 ರಂದು “ಮೆಂಬರ್ ಶಿಪ್ ಡೇ”ಗೆ ಸದಸ್ಯತ್ವ ಸ್ವೀಕರಿಸಲು ಆಹ್ವಾನ: WIM

ಜುಲೈ 25 ರಂದು “ಮೆಂಬರ್ ಶಿಪ್ ಡೇ”ಗೆ ಸದಸ್ಯತ್ವ ಸ್ವೀಕರಿಸಲು ಆಹ್ವಾನ: WIM

ಮಂಗಳೂರು: ಘನತೆಯ ಸಮಾಜಕ್ಕಾಗಿ ಒಂದಾಗೋಣ” ವಿಮೆನ್ ಇಂಡಿಯಾ ಮೂಮೆಂಟ್ ರಾಷ್ಟ್ರೀಯ ಸದಸ್ಯತ್ವ ಅಭಿಯಾನದ ಪ್ರಯುಕ್ತ ಕರ್ನಾಟಕ ರಾಜ್ಯ ಸಮಿತಿಯು ಜುಲೈ 25ರಂದು ಮೆಂಬರ್ಶಿಪ್ ಡೇ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ.

ಮೆಂಬರ್ಶಿಪ್ ಡೇ ವಿಶೇಷ ದಿನದಂದು ಸದಸ್ಯತ್ವ ತರಗತಿಗಳು,ಮನೆ-ಮನೆ ಭೇಟಿ, ಸಾಮಾಜಿಕ ಕಾರ್ಯಕರ್ತೆಯರ ಭೇಟಿ,ಕೌಟುಂಬಿಕ-ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪ್ರಸ್ತಾವನೆ, ಆನ್ಲೈನ್ ವಿಶೇಷ ತರಗತಿಗಳು ಇತ್ಯಾದಿಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ಸದಸ್ಯರಾಗಲು ಆಹ್ವಾನಿಸಲಾಗುವುದು.

ಮಹಿಳೆಯರ ಶೈಕ್ಷಣಿಕ ಆರ್ಥಿಕ ರಾಜಕೀಯ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಮಹಿಳೆಯರೆಲ್ಲರೂ ಒಂದಾಗಿ ಶ್ರಮಿಸಿದಾಗ ‘ಘನತೆಯ ಸಮಾಜ’ ನಿರ್ಮಾಣ ಸಾಧ್ಯ.ಅದಕ್ಕಾಗಿ ನಾಗರಿಕ ಸಮಾಜ ನಮ್ಮೊಂದಿಗೆ ಕೈಜೋಡಿಸಬೇಕೆಂದು ರಾಜ್ಯ ಉಪಾಧ್ಯಕ್ಷೆ ಶಾಝಿಯ ಬೆಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ

Join Whatsapp
Exit mobile version