Home ಟಾಪ್ ಸುದ್ದಿಗಳು AILC ವತಿಯಿಂದ ಬೆಂಗಳೂರಿನಲ್ಲಿ ಹೊಸ ಕ್ರಿಮಿನಲ್‌ ಕಾಯ್ದೆ ಕುರಿತು ವಿಚಾರ ಸಂಕಿರಣ

AILC ವತಿಯಿಂದ ಬೆಂಗಳೂರಿನಲ್ಲಿ ಹೊಸ ಕ್ರಿಮಿನಲ್‌ ಕಾಯ್ದೆ ಕುರಿತು ವಿಚಾರ ಸಂಕಿರಣ

ಬೆಂಗಳೂರು: ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ (AILC) ಇದರ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೂರು ಕ್ರಿಮಿನಲ್ ಕಾಯ್ದೆಯ ಕುರಿತು ವಿಚಾರ ಸಂಕಿರಣವನ್ನು ಬೆಂಗಳೂರಿನ ಪಾಲನ ಭವನದಲ್ಲಿ ದಿನಾಂಕ 21ಜುಲೈ 2024ರಂದು ಫ್ರೋ. ಅಡ್ವಕೇಟ್‌ ಹರಿರಾಂ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ವಿಚಾರ ಸಂಕಿರಣದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ನಿವೃತ್ತ ಜಿಲ್ಲಾ ನ್ಯಾಯಧೀಶರಾದ ಎಸ್‌. ಆರ್‌ ಸೋಮಶೇಕರ್‌ ಅವರು ಕ್ರಿಮಿನಲ್‌ ಕಾಯ್ದೆಯ ಕುರಿತು ವಿವರಣೆ ನೀಡಿದರು.

ಈ ಕಾರ್ಯಗಾರದಲ್ಲಿ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ ಇದರ ಅಧ್ಯಕ್ಷರಾದ ಅಡ್ವಕೇಟ್ ಎಸ್‌ ಬಾಲನ್‌ ಅವರು‌ ಹೊಸ ಕ್ರಿಮಿನಲ್‌ ಕಾಯ್ದೆಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ,ಇದು ಅಮಿತ್ ಶಾ ಕಾನೂನು ಎಂದು ವ್ಯಂಗ್ಯ ವ್ಯಕ್ತಪಡಿಸಿದರು. ಅಡ್ವಕೇಟ್‌ ‌ ಬಿ.ಟಿ ವೆಂಕಟೇಶ್ ಅವರು ಮಾತನಾಡಿ ಹೊಸ ಕ್ರಿಮಿನಲ್‌ ಕಾಯ್ದೆಯಿಂದ ಜನಸಾಮಾನ್ಯರಿಗೆ ಆಗುವ ತೊಂದರೆಗಳನ್ನು ವಿವರಿಸಿದರು.

ಈ ವಿಚಾರ ಸಂಕಿರಣದಲ್ಲಿ ಮುಖ್ಯ ಅಥಿತಿಗಳಾಗಿ ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ಸ್ ಕೌನ್ಸಿಲ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್‌ ಮಜೀದ್‌ ಖಾನ್‌, ಅಡ್ವೊಕೇಟ್ ಸಾಜಿದ, ಅಡ್ವೊಕೇಟ್ ಮನೋರಂಜಿನಿ, ಅಡ್ವೊಕೇಟ್ ರಫೀಕ್, ಅಡ್ವೊಕೇಟ್ ವಸೀಮುದ್ದೀನ್,ಹಾಗೂ ಹಿರಿಯ ಮತ್ತು ಕಿರಿಯ ವಕೀಲರು, ಸಾಮಾಜಿಕ ಹೋರಾಟಗಾರರು,ಚಿಂತಕರು,ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಡ್ವೊಕೇಟ್ ಇರ್ಷಾದ್ ಮೈಸೂರು ವಂದಿಸಿ, ಅಡ್ವಕೇಟ್‌ ಜಗನ್ನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು.

Join Whatsapp
Exit mobile version