Home ಟಾಪ್ ಸುದ್ದಿಗಳು ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಹಾಸ್ಯಾಸ್ಪದ : ಡಾ.ಜಿ.ಪರಮೇಶ್ವರ್

ನಾನು ಬಿಜೆಪಿ ಸೇರುತ್ತೇನೆ ಎನ್ನುವುದು ಹಾಸ್ಯಾಸ್ಪದ : ಡಾ.ಜಿ.ಪರಮೇಶ್ವರ್

ಕೊರಟಗೆರೆ: ನನ್ನ ತಂದೆ ಮೂಲಕ ಬಾಲ್ಯದಿಂದಲೇ ಕಾಂಗ್ರೆಸ್ ಪಕ್ಷದ ಸಿದ್ದಾಂತ ಮೈಗೂಡಿಸಿಕೊಂಡಿರುವ ನನ್ನನ್ನು ”ಬಿಜೆಪಿ ಸೇರುತ್ತಾನೆ” ಎನ್ನುವುದು ನೋಡಿದರೆ ಹಾಸ್ಯಾಸ್ಪದ ಅನಿಸುವುದಿಲ್ಲವೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಪಟ್ಟಣದ ಹನುಮಂತಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ನೂತನವಾಗಿ ನಿರ್ಮಾಣ ಮಾಡುವ ಕಾಂಗ್ರೆಸ್ ಭವನಕ್ಕೆ ಅಡಿಗಲ್ಲು ಹಾಕಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷವು ಜನರನ್ನು ಒಂದುಗೂಡಿಸುವುದಕ್ಕೆ, ಭಾರತೀಯರಲ್ಲಿ ಸಮಾನತೆ ಮೂಡಿವುದಕ್ಕೆ, ಬಡತನ ಹೋಗಲಾಡಿಸಲು, ರೈತರಿಗೆ ನೀರಾವರಿ ತರಲು, ಸಾಕಷ್ಟು ಶ್ರಮವಹಿಸಿದೆ ದೇಶದ ಹಿತಕ್ಕಾಗಿ ಇಂದಿರಾಗಾಂಧಿ, ರಾಜೀವ್‌ಗಾಂಧಿ ಪ್ರಾಣ ಬಲಿದಾನ ಮಾಡಿದ್ದಾರೆ.

ಬಿಜೆಪಿ ಪಕ್ಷ ದೇಶದಲ್ಲಿ ಜಾತಿ ಧರ್ಮ ವಿಷಬೀಜ ಬಿತ್ತುತ್ತಿದೆ, ರಾಜ್ಯದ ಬಿಜೆಪಿ ಸರ್ಕಾರ ಇತಿಹಾಸ ತಿರುಚಿ ನೂತನ ಪಠ್ಯಪುಸ್ತಕವನ್ನು ಶಾಲಾ ಮಕ್ಕಳಿಗೆ ಒದಗಿಸುವ ಹುನ್ನಾರ ಮಾಡಿದೆ, ಅದರಲ್ಲಿ ನಮ್ಮ ಸಂವಿಧಾನ ಶಿಲ್ಪಿ ಅಂಬೇಡ್ಕರ್, ಅಣ್ಣ ಬಸವಣ್ಣ, ರಾಷ್ಟಕವಿ ಕುವೆಂಪು ರವರುಗಳ ಜೀವನ ಚರಿತ್ರೆ ತಿರುಚಲಾಗಿದೆ ಎನ್ನುವ ಆಪಾದನೆ ಇದ್ದರೂ ಕೆಲವರ ಒತ್ತಡಕ್ಕೆ ಸರ್ಕಾರ ಮಣಿಯುತ್ತಿದೆ ಎಂದರು.

Join Whatsapp
Exit mobile version