Home ಕರಾವಳಿ ಪೂಂಜಾ ದ್ವೇಷ ಭಾಷಣದ ಸಮರ್ಥನೆಗೆ ಸಚಿವ ಗುಂಡೂರಾವ್ ಪ್ರತಿಕ್ರಿಯೆ ನೀಡದಿರುವುದು ಖೇದಕರ: ಕೆ.ಅಶ್ರಫ್

ಪೂಂಜಾ ದ್ವೇಷ ಭಾಷಣದ ಸಮರ್ಥನೆಗೆ ಸಚಿವ ಗುಂಡೂರಾವ್ ಪ್ರತಿಕ್ರಿಯೆ ನೀಡದಿರುವುದು ಖೇದಕರ: ಕೆ.ಅಶ್ರಫ್

0

ಮಂಗಳೂರು: ಶಾಸಕ ಹರೀಶ್ ಪೂಂಜಾ ದ್ವೇಷ ಭಾಷಣದ ಸಮರ್ಥನೆಗೆ ಸಚಿವ ಗುಂಡೂರಾವ್ ಪ್ರತಿಕ್ರಿಯೆ ನೀಡದಿರುವುದು ಖೇದಕರ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದ.ಕ.ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ ದ್ವೇಷ ಭಾಷಣಗಳಿಂದ ಜಿಲ್ಲೆಯ ಶಾಂತಿ ಕದಡುವುದಿಲ್ಲ ಬದಲಾಗಿ ಇಲ್ಲಿ ಧಾರ್ಮಿಕ ಸಂಕೇತವಾದ ಗೂಹತ್ಯೆಯಿಂದ ಮತ್ತು ಭಿನ್ನ ಸಮುದಾಯದವರ ಲವ್ ಕಾರಣದಿಂದ ಶಾಂತಿ ಕದಡುತ್ತಿದೆ ಎಂದು ಜಿಲ್ಲಾಡಳಿತ ಮತ್ತು ಗೃಹ ಮಂತ್ರಿಗಳ ಎದುರಿಗೆ ಮ್ಯಾಜಿಕ್ ಮಂತ್ರ ಪಠಿಸಿದ್ದಾರೆ. ಇದನ್ನು ಕೇಳಿ ಜಿಲ್ಲಾಡಳಿತ ಮತ್ತು ಸಚಿವರು ಪ್ರತಿಕ್ರಿಯೆ ನೀಡಿಲ್ಲ ಎಂಬುದು ಖೇದಕರ ಎಂದರು.

ಧಾರ್ಮಿಕ ಸಂಕೇತ ಪ್ರಾಣಿಯ ತಾಂತ್ರಿಕ ವಧೆ ನಡೆಸಿ ಮೆಗಾ ಟನ್ ಗಟ್ಟಲೆ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಕೇಂದ್ರ ಸರಕಾರಕ್ಕೆ ಪೂಂಜಾ ಈ ಸಲಹೆ ನೀಡಲಿ, ಇತ್ತೀಚೆಗೆ ಬ್ರಹ್ಮಾವರದ ಗೋಸಾಗಾಟ ಪ್ರಕರಣದಲ್ಲಿ ಶಾಮೀಲು ಗೊಂಡವರು ಯಾರು ಎಂದು ಶಾಂತಿಸಭೆಗೆ ಪೂಂಜಾ ತಿಳಿಸಬೇಕಿತ್ತು. ಪೂಂಜಾ ಅವರು ಜಿಲ್ಲೆಯಲ್ಲಿನ ದ್ವೇಷ ಭಾಷಣವನ್ನು ಸಮರ್ಥಿಸುವ ನಡೆ ಖಂಡನಾರ್ಹ ಮತ್ತು ಸರಕಾರಕ್ಕೆ ಹಾಕಿದ ಸವಾಲು ಆಗಿರುತ್ತದೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version