Home ಟಾಪ್ ಸುದ್ದಿಗಳು ನಿಮ್ಮ ಸಂಘದ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ನಾಚಿಕೆಗೇಡು: ಕಾಂಗ್ರೆಸ್ ಆಕ್ರೋಶ

ನಿಮ್ಮ ಸಂಘದ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ನಾಚಿಕೆಗೇಡು: ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಭಗತ್ ಸಿಂಗ್ ಪಠ್ಯವನ್ನು ಪಠ್ಯಪುಸ್ತಕದಿಂದ ಕೈಬಿಟ್ಟ ಕ್ರಮ ಈ ಬಿಜೆಪಿ ಸರ್ಕಾರದ ರಾಷ್ಟ್ರಭಕ್ತಿಯ ಮುಖವಾಡವನ್ನು ಕಳಚಿ ಹಾಕಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಭಗತ್ ಸಿಂಗ್ ಬದಲು ಬ್ರಿಟಿಷರೊಂದಿಗೆ ಕೈ ಜೋಡಿಸಿದವರ ಪಠ್ಯವನ್ನು ಸೇರಿಸಲಾಗಿದೆ. ಇದು ನಿಜವಾದ ದೇಶದ್ರೋಹಿಗಳ ಕೆಲಸ. ನಿಮ್ಮ ದೇಶದ್ರೋಹ ಜನತೆಗೆ ತಿಳಿಯಲಿದೆ ಎಂದು ಕಾಂಗ್ರೆಸ್ ಟೀಕಿಸಿದೆ.


ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಇದು ಪಠ್ಯ ಪುಸ್ತಕವೇ ಹೊರತು ನಿಮ್ಮ ಸಂಘದ ಪುಸ್ತಕವಲ್ಲ. ಯಾರೋ ಅಷ್ಟ ವಕ್ರನನ್ನು ಪಠ್ಯ ಪುಸ್ತಕ ಸಮಿತಿಯಲ್ಲಿ ಕೂರಿಸಿದ ಪರಿಣಾಮ ಇದು. ನಿಮ್ಮ ಸಂಘದ ಅಜೆಂಡಾಗಳನ್ನು ಮಕ್ಕಳ ಮೇಲೆ ಹೇರಲು ಹೊರಟಿರುವುದು ನಾಚಿಕೆಗೇಡು. ಸರ್ಕಾರ ಇಂತಹ ಹೊಣೆಗೇಡಿಗಳನ್ನು ಪಠ್ಯ ಪುಸ್ತಕ ಸಮಿತಿಯಿಂದ ಹೊರಗಿಡಲಿ ಎಂದು ಆಗ್ರಹಿಸಲಾಗಿದೆ.

Join Whatsapp
Exit mobile version